ಬೆಳ್ತಂಗಡಿ, ಭಾರೀ ಸಿಡಿಲು ಗಾಳಿಯೊಂದಿಗೆ ಸುರಿದ ಮಳೆ: ತಾಲೂಕಿನಾದ್ಯಂತ ಮರ ಬಿದ್ದು ಅಪಾರ ಹಾನಿ :ಮುರಿದು ಬಿದ್ದ 100 ಕ್ಕಿಂತಲೂ ಅಧಿಕ ವಿದ್ಯುತ್ ಕಂಬಗಳು : ಲಕ್ಷಾಂತರ ರೂ ನಷ್ಟ:

 

 

ಬೆಳ್ತಂಗಡಿ: ತಾಲೂಕಿನಾದ್ಯಂತ ಬುಧವಾರ ಸಂಜೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಹಲವಾರೂ ಅನಾಹುತಗಳು ಸಂಭವಿಸಿದೆ. ತಾಲೂಕಿನ ವಿವಿಧ ಕಡೆಗಳಲ್ಲಿ ಮರ ಉರುಳಿ ಬಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಲ್ಲದೇ 90 ಕ್ಕಿಂತಲೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದು ಲಕ್ಷಾಂತರ ರೂ ಹಾನಿ ಸಂಭವಿಸಿದೆ. ಗುರುವಾಯನಕೆರೆ ವೇಣೂರು ರ, ಮಾಲಾಡಿ ಸೋಣಂದೂರು ರಸ್ತೆಗೆ ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆಉಂಟಾಗಿತ್ತು.ಮಡಂತ್ಯಾರ್ 35, ಅಳದಂಗಡಿ 20,ಬೆಳ್ತಂಗಡಿ 17, ವೇಣೂರು 45 ಸೇರಿದಂತೆ ಒಟ್ಟು 107 ಕಂಬಗಳು ಮುರಿದಿದೆ.

 

 

 

ಒಟ್ಟು ಸುಮಾರು 20 ಲಕ್ಷಕ್ಕಿಂತಲೂ ಅಧಿಕ ನಷ್ಟ ಸಂಭವಿಸಿದೆ. ಮರೋಡಿಯಲ್ಲಿ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಲಾಯಿಲ ಗ್ರಾಮದ ಕೊಯ್ಯೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು,ಚರಂಡಿ ಸಮರ್ಪಕವಾಗಿ ಇಲ್ಲದಿದ್ದುದರಿಂದ ಸದಾಶಿವ ಕಕ್ಕೇನ ಎಂಬವರ ಮನೆಯ ಅಂಗಳಕ್ಕೆ ನೀರು ನುಗ್ಗಿ  ಹಾನಿಯಾಗಿದೆ.

error: Content is protected !!