ಬೆಳ್ತಂಗಡಿ, ಬಿಸಿಲಿನ ತಾಪಕ್ಕೆ ಮಳೆಯ ಸಿಂಚನ: ಧರ್ಮಸ್ಥಳ, ಉಜಿರೆ, ಸೇರಿದಂತೆ ಕೆಲವೆಡೆ ಗಾಳಿ ಸಿಡಿಲಿನ ಅಬ್ಬರದೊಂದಿಗೆ ಮಳೆ :

 

 

 

ಬೆಳ್ತಂಗಡಿ: ಬಿಸಿಲಿನ ತಾಪ, ವಿಪರೀತ ಸೆಖೆಯಿಂದ ಕಂಗಲಾಗಿದ್ದ ತಾಲೂಕಿನ ಜನರಿಗೆ ಮಳೆರಾಯ ಕರುಣೆ ತೋರಿದ್ದಾನೆ. ಧರ್ಮಸ್ಥಳ .ಸೇರಿದಂತೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ.  ಸಿಡಿಲು ಗಾಳಿಯ ಅಬ್ಬರದೊಂದಿಗೆ ಮಳೆ ಸುರಿಯಲು ಪ್ರಾರಂಭವಾಗಿದೆ. ಉಜಿರೆ , ಕಕ್ಕಿಂಜೆ ಸೇರಿದಂತೆ ಹಲವು ಕಡೆಗಳಲ್ಲಿ  ಆಲಿಕಲ್ಲು   ಮಳೆಯಾಗಿರುವ   ಮಾಹಿತಿ ಲಭ್ಯವಾಗಿದೆ.

 

 

ಸುಳ್ಯ ತಾಲೂಕು, ಕಡಬ ಗಳಲ್ಲಿಯೂ ಈಗಾಗಲೇ ಸಾಧಾರಣ ಮಳೆಯಾಗಿದ್ದು , ಕಳೆದ ಒಂದು ವಾರಗಳಿಂದ ವಿಪರೀತ ಬಿಸಿಲಿನ ಬೇಗೆ ಹೆಚ್ಚಾಗಿದೆ. ಈಗಾಗಲೇ ಜಿಲ್ಲಾಡಳಿತ ಬಿಸಿಲಿನ ಅಘಾತದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ನದಿ ತೊರೆಗಳಲ್ಲಿ ನೀರು ಬತ್ತಿ ಹೋಗಿದ್ದು, ಒಮ್ಮೆ ಮಳೆ ಬಂದ್ದು ಈ ಬೇಗೆಯಿಂದ ಮುಕ್ತಿ ಸಿಗಲಿ ಎಂದು ಜನರಾಡಿಕೊಳ್ಳುತಿರುವಾಗಲೇ ಇಳೆಗೆ ಮಳೆಯ ಸಿಂಚನವಾಗಿದೆ..

error: Content is protected !!