ಪುತ್ತೂರು: ಕಾಸರಗೋಡಿನ ಪೈವಳಿಗಾದಿಂದ ಕಳೆದ ಫೆ 12 ರಂದು ನಾಪತ್ತೆಯಾಗಿದ್ದ ಬಾಲಕಿ ಹಾಗೂ ನೆರೆಮನೆಯ ವ್ಯಕ್ತಿ ನೇಣು ಬಿಗಿದುಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
15 ವರ್ಷದ ಬಾಲಕಿ ಮತ್ತು 42 ವರ್ಷದ ವ್ಯಕ್ತಿಯ ಶವ ಪೈವಳಿಗಾದ ಬಾಲಕಿಯ ಮನೆ ಸಮೀಪ, ಮಂಡೆಕ್ಕಾಪ್ ಮೈದಾನದ ಪಕ್ಕದ ಅಕೇಶಿಯಾ ಮರದಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಎರಡು ಮೊಬೈಲ್ ಫೋನ್ ಮತ್ತು ಚಾಕು ದೊರೆತಿದೆ.
ಜಾಹೀರಾತು
ಕೇರಳದ ಗಡಿ ಪ್ರದೇಶಗಳು ಸೇರಿದಂತೆ ವಿವಿಧ ಠಾಣೆಗಳ 52 ಪೊಲೀಸರು ಹಾಗೂ ಸ್ಥಳೀಯರು ಸುಳ್ಯ ಸೇರಿದಂತೆ ಕರ್ನಾಟಕ, ಕಾಸರಗೋಡಿನ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ವ್ಯಾಪಕ ಶೋಧ ನಡೆಸುತ್ತಿದ್ದಾಗ ನಿನ್ನೆ ಶವ ಸಿಕ್ಕಿದೆ. ಮೃತಪಟ್ಟು ಅಂದಾಜು 25 ದಿನಗಳು ಆಗಿರಬಹುದೆಂದು ಪೊಲೀಸರು ಹೇಳಿದ್ದಾರೆ. ಬಾಲಕಿ ಕಾಣೆಯಾದಾಗ ಧರಿಸಿದ್ದ ಬಟ್ಟೆಯೇ ಮೃತದೇಹದ ಮೇಲೂ ಇದೆ ಎಂಬ ಮಾಹಿತಿ ನೀಡಿದ್ದಾರೆ.