ಬಂಟ್ವಾಳ: ಭೂ ಕೈಲಾಸವೇಂದೇ ಖ್ಯಾತಿ ಪಡೆದ ಶ್ರೀ ಮಹಾತೋಭಾರ ಶ್ರೀ ಕಾರಿಜೇಶ್ವರ ದೇವಸ್ಥಾನದ ಕುರಿತಾದ ತುಳು ಭಕ್ತಿಗೀತೆ ಇಂದು (ಫೆ.26) ಸಂಜೆ ಬಿಡುಗಡೆಗೊಳ್ಳಲಿದೆ.
ಶ್ರೀ ಕಾರಿಂಜ ಕ್ಷೇತ್ರದ ಜಾತ್ರಾ ಮಹೋತ್ಸವದ ಸಂದರ್ಭದಲ್ಲೇ ಕಲಾರಂಗ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಭಕ್ತಿಗೀತೆ ಬಿಡುಗಡೆಯಾಗಲಿದೆ.
“ಪ್ರತಿಭಾ ಸಿಂಚನ” ಅಕ್ಷಯ್ ಆಚಾರ್ಯ ಕಾವಳಕಟ್ಟೆ ಇವರ ಅದ್ಭುತ ಕಂಠದಲ್ಲಿ ಮೂಡಿಬರಲಿರುವ ಈ ಭಕ್ತಿಗೀತೆಗೆ “ಸಾಹಿತ್ಯ ಯುವಸಿರಿ” ಅನಿಲ್ ಮಡಿವಾಳ್ ಅವರು ಸಾಹಿತ್ಯ ಬರೆದಿದ್ದಾರೆ. ಶೃತಾಂಜನ್ ಜೈನ್ ಯಜಮಾನರು ಅಲಂಪುರಿ ಗುತ್ತು, ಅಜಿತ್ ಶೆಟ್ಟಿ ಕಾರಿಂಜ, ಕುಶಲ್ ಕುಮಾರ್ ಕೆ., ಚಂದ್ರಶೇಖರ ಶೆಟ್ಟಿ, ಗೋಪಾಲ ಶೆಟ್ಟಿ ಇವರುಗಳ ನಿರ್ಮಾಣವಿದ್ದು, ಆದಿತ್ಯ ಉಡುಪಿ ಅವರ ಛಾಯಗ್ರಹಣ ಹಾಗೂ ಸಂಕಲವಿರಲಿದೆ.
ಅಭಿಷೇಕ ಆಚಾರ್ಯ ಅವರ ಕೈಚಳಕದಲ್ಲಿ ಪೋಸ್ಟರ್ ಮೂಡಿಬಂದಿದ್ದು, ಇಂದು ಸಂಜೆ 7ಗಂಟೆಗೆ ಭಕ್ತಿಗೀತೆ ಬಿಡುಗಡೆಗೊಳ್ಳಲಿದೆ.