ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆ: ಮೃತದೇಹ ಮನೆಗೆ ಬಂದಾಗ ಜೀವಂತ!

ಸಾಂದರ್ಭಿಕ ಚಿತ್ರ

ಭದ್ರಾವತಿ: ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯೋರ್ವರ ಮೃತದೇಹ ಮನೆಗೆ ಬಂದಾಗ ಪುನಃ ಜೀವ ಬಂದಿರುವ ಆಶ್ಚರ್ಯಕರ ಘಟನೆ ಗಾಂಧಿನಗರದಲ್ಲಿ ಸಂಭವಿಸಿದೆ.

ಸಿವಿಲ್ ಗುತ್ತಿಗೆದಾರ ಸುಬ್ರಹ್ಮಣಿ ಅವರ ಪತ್ನಿ ಮೀನಾಕ್ಷಿ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ “ಚಿಕಿತ್ಸೆಗೆ ಮಹಿಳೆ ಸ್ಪಂದಿಸುತ್ತಿಲ್ಲ. ಉಸಿರು ನಿಂತಿದ್ದು, ಅವರು ಮೃತಪಟ್ಟಿದ್ದಾರೆ” ಎಂದು ಆಸ್ಪತ್ರೆಯ ವೈದ್ಯರು ಸೋಮವಾರ ತಡರಾತ್ರಿ ಘೋಷಿಸಿದ್ದಾರೆ.

ಮಹಿಳೆಯ ಸಾವಿನ ಸುದ್ದಿಯನ್ನು ಬಂಧು ಬಳಗದವರಿಗೆಲ್ಲ ತಿಳಿಸಿ, ಮನೆಯವರು ಅಂತ್ಯಕ್ರಿಯೆಗೆ ಎಲ್ಲಾ ತಯಾರಿಯನ್ನೂ ಮಾಡಿಕೊಂಡಿದ್ದರು. ಬಳಿಕ ಮಂಗಳವಾರ ಬೆಳಿಗ್ಗೆ ಮಹಿಳೆಯ ಪಾರ್ಥೀವ ಶರೀರವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಬರಲಾಗಿದೆ. ಆದರೆ ವಾಹನದಿಂದ ಇಳಿಸುವಾಗ, ಆ ಮಹಿಳೆ ಕಣ್ತೆರೆದು ಎಲ್ಲಿರಿಗೂ ಅಚ್ಚರಿ ಮೂಡಿಸಿದ್ದಾರೆ.ಮಹಿಳೆಗೆ ಜೀವ ಇರುವುದು ಖಾತ್ರಿಯಾದ ಬೆನ್ನಲ್ಲೇ ಅವರಿಗೆ ನೀರನ್ನು ಕುಡಿಸಿ, ಹತ್ತಿರ ನರ್ಸಿಂಗ್ ಹೋಂಗೆ ಕರೆದೊಯ್ಯಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!