ಚಿಕ್ಕಮಗಳೂರು: ಸರ್ಕಾರಿ ಶಾಲೆಗೆ ಕಾಫಿ ಉದ್ಯಮಿಯಿಂದ 2.18 ಕೋಟಿ ರೂ. ದೇಣಿಗೆ: 20 ಸಿಸಿಟಿವಿ ಕ್ಯಾಮೆರಾ, ಹೈಟೆಕ್ ಅಡುಗೆ ಮನೆ..: ಮಗನಿಗೂ ಸರಕಾರಿ ಶಾಲೆಯಲ್ಲೇ ಶಿಕ್ಷಣ!

ಚಿಕ್ಕಮಗಳೂರು: ಒಂದೆಡೆ ಸರಕಾರಿ ಶಾಲೆಗೆ ಮಕ್ಕಳು ಬಾರದೆ ಸರಕಾರಿ ಶಾಲೆಗಳು ಮುಚ್ಚುತ್ತಿದೆ, ಇನ್ನೊಂದೆಡೆ ಮಕ್ಕಳಿದ್ದರೂ ಸರಕಾರಿ ಶಾಲಾ ಕಟ್ಟಗಳು ದುಸ್ಥಿಯಲ್ಲಿದೆ. ಈ ಮಧ್ಯೆ ಮೂಡಿಗೆರೆ ತಾಲೂಕಿನ ಸರಕಾರಿ ಶಾಲೆಯೊಂದು ದಾನಿಗಳ ನೆರವಿನಿಂದ ಅಭಿವೃದ್ಧಿಯಾಗಿ ರಾಜ್ಯದಲ್ಲಿ ಮಾದರಿ ಶಾಲೆಯಾಗುತ್ತ ಹೆಜ್ಜೆಇಟ್ಟಿದೆ.

ಹೌದು, ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಫಿ ರಫ್ತುದಾರ ಸಂತೋಷ್ ಬರೋಬ್ಬರಿ 2.18 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಮುದ್ರೆಮನೆ ಕಾಫಿ ಕ್ಯೂರಿಂಗ್ ಘಟಕದ ಮಾಲೀಕರಾದ ಸಂತೋಷ್, ಸರ್ಕಾರಿ ಶಾಲೆಯಲ್ಲಿ ಓದಿ, ನಂತರ ಕಾಫಿ ಉದ್ಯಮದಲ್ಲಿ ಸಾಧನೆ ಮಾಡಿದ್ದಾರೆ. ಸದ್ಯ ಅವರು ಕಾಫಿ ರಫ್ತು ಉದ್ಯಮ ನಡೆಸುತ್ತಿದ್ದಾರೆ.
1973 ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಪ್ರಸ್ತುತ 363 ವಿದ್ಯಾರ್ಥಿಗಳು ಇದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದ ತಿಳಿಸಿದೆ. ಉದ್ಯಮಿ ಸಂತೋಷ್ ಅವರು ನೀಡಿದ ದೇಣಿಗೆಯಿಂದ 8 ಸುಸಜ್ಜಿತ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. 18 ಲಕ್ಷ ರೂ. ವೆಚ್ಚದಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ‘ವಿವೇಕ ಯೋಜನೆಯ’ಡಿಯಲ್ಲಿ 56 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಹೆಚ್ಚುವರಿ ತರಗತಿ ಕೊಠಡಿಗಳನ್ನು ಸೇರಿಸಲಾಗಿದೆ. ಫೆಬ್ರವರಿ 28 ರಂದು ಒಟ್ಟು 12 ತರಗತಿ ಕೊಠಡಿಗಳನ್ನು ಉದ್ಘಾಟಿಸಲಾಗುವುದು ಎಂದು ವರದಿ ತಿಳಿಸಿದೆ.
ಮುದ್ರೆಮನೆ ಕಾಫಿ ಕ್ಯೂರಿಂಗ್ ಘಟಕದ ಮಾಲೀಕರಾದ ಸಂತೋಷ್ ಅವರ ಇದೇ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂಬುದು ಗಮನಾರ್ಹ.

ವಿವಿಧ ಉದ್ಯಮಿಯಿಂದಲೂ ದೇಣಿಗೆ

ಮುತ್ತಿಗೆಪುರದ ಈ ಶಾಲೆಗೆ ಅನೇಕ ದಾನಿಗಳಿಂದ ದೇಣಿಗೆಗಳು ಹರಿದು ಬರುತ್ತಿದ್ದು ದಾನಿಗಳ ಬೆಂಬಲಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಮಧುಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಈ ಗ್ರಾಮದ ಉದ್ಯಮಿ ಸಿದ್ದಿಕ್, ಶಾಲೆಗೆ 60,000 ರೂ. ಮೌಲ್ಯದ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕವನ್ನು ದಾನ ಮಾಡಿದ್ದಾರೆ. ಶಾರ್ಲಿನ್ ವಿಲಿಯಮ್ಸ್ ಎಂಬ ಕಂಪನಿಯು 18 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳನ್ನು ನೀಡಿದೆ. ಯೂತ್ ಫಾರ್ ಸೇವಾ ಸಂಸ್ಥೆಯು ಎಂಟು ಕಂಪ್ಯೂಟರ್‌ಗಳು ಮತ್ತು ಅವುಗಳ ಬಳಕೆಗೆ ಅಗತ್ಯವಿರುವ ಟೇಬಲ್‌ಗಳನ್ನು ಒದಗಿಸಿದೆ. ಶಾಲಾ ಆವರಣ ಮತ್ತು ತರಗತಿ ಕೊಠಡಿಗಳಲ್ಲಿ 20 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ದಾನಿಗಳು ಮುಂದೆ ಬಂದಿದ್ದಾರೆ. ಮಧ್ಯಾಹ್ನದ ಊಟ ತಯಾರಿಗಾಗಿ 5 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಅಡುಗೆಮನೆಯನ್ನು ನಿರ್ಮಿಸಲು ಸಹ ದೇಣಿಗೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

error: Content is protected !!