ಮದುವೆ ಮಂಟಪದಲ್ಲಿ ಭಾರತ – ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ನೇರಪ್ರಸಾರ!: ಎಲ್‌ಇಡಿ ಸ್ಕ್ರೀನ್ ಮೂಲಕ ಮ್ಯಾಚ್ ವೀಕ್ಷಣೆಗೆ ಅವಕಾಶ

ಅದಿಲಾಬಾದ್ ಪಟ್ಟಣದಲ್ಲಿ ನಡೆದ ಮದುವೆ ಮನೆಯೊಂದರಲ್ಲಿ ಭಾನುವಾರ ನಡೆದ ಭಾರತ – ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಮೂಲಕ ನವದಂಪತಿಗಳು ವಿಶೇಷವಾಗಿ ಗಮನ ಸೆಳೆದರು.

ಎಲ್‌ಇಡಿ ಪರದೆಯ ಮೇಲೆ ಮದುವೆಯ ವಿಡಿಯೊವನ್ನು ತೋರಿಸಬೇಕಿತ್ತು. ಆದರೆ ಭಾರತ – ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಹೈವೋಲ್ಟೇಜ್ ಪಂದ್ಯದ ನೇರಪ್ರಸಾರ ಮಾಡಲಾಗಿತ್ತು. ಪಂದ್ಯ ವೀಕ್ಷಿಸಿದ ಹಿತೈಷಿಗಳು, ಸ್ನೇಹಿತರು ನವದಂಪತಿಗೆ ಆಶೀರ್ವದಿಸಿದರು.

ಸಾಮಾಜಿಕ ಜಾಲತಾಣದಲ್ಲಿ ವರನ ಸ್ನೇಹಿತರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, “ನನ್ನ ಸ್ನೇಹಿತನ ಮದುವೆ ದಿನವೇ ಭಾರತ – ಪಾಕಿಸ್ತಾನ ಪಂದ್ಯವಿದ್ದ ಕಾರಣ ಪಂದ್ಯದ ನೇರಪ್ರಸಾರ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಮದುವೆಗೆ ಬಂದಿದ್ದ ನಮ್ಮ ಎಲ್ಲಾ ಸ್ನೇಹಿತರು ಪಂದ್ಯದ ನೇರಪ್ರಸಾರ ವೀಕ್ಷಿಸಿ ಖುಷಿಪಟ್ಟರು. ಒಂದೆಡೆ ಅದ್ಧೂರಿ ಮದುವೆ, ಮತ್ತೊಂದೆಡೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿತ್ತು. ಎರಡನ್ನೂ ನೋಡುವ ಅವಕಾಶ ನಮ್ಮದಾಗಿತ್ತು” ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು, ಭಾರತ – ಪಾಕಿಸ್ತಾನ ಪಂದ್ಯಕ್ಕೆ ಅದೆಷ್ಟು ಕ್ರೇಜ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ.

error: Content is protected !!