ಕುಂಭಮೇಳಕ್ಕೆ ತೆರಳುತ್ತಿದ್ದ ವಾಹನ ಅಪಘಾತ: ಕರ್ನಾಟಕದ 6 ಮಂದಿ ಸಾವು!: ಇಬ್ಬರಿಗೆ ಗಂಭೀರ ಗಾಯ!

 

ಬೆಳಗಾವಿ: ಗೋಕಾಕ್ ನಿಂದ ಕುಂಭಮೇಳಕ್ಕೆ ತೆರಳುತ್ತಿದ್ದ ವಾಹನವೊಂದು ಇಂದು (ಫೆ.24)ಮುಂಜಾನೆ ಮಧ್ಯ ಪ್ರದೇಶ ರಾಜ್ಯದಲ್ಲಿ ಅಪಘಾತಕ್ಕೀಡಾಗಿದ್ದು, ವಾಹನದಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ.

ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ(50), ಸುನೀಲ್ ಶೇಡಶ್ಯಾಳೆ(45), ಬಸವರಾಜ ಕುರ್ತಿ(63), ಬಸವರಾಜ ದೊಡಮಾಳ(49), ಈರಣ್ಣ ಶೇಬಿನಕಟ್ಟಿ(27) ಹಾಗೂ ವಿರೂಪಾಕ್ಷ ಗುಮತಿ(61) ಮೃತಪಟ್ಟವರು ಎಂದು ತಿಳಿದುಬಂದಿದೆ.

ತೂಫಾನ್ ವಾಹನದಲ್ಲಿ ಇವರು ಗೋಕಾಕ್ ನಿಂದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದರು. ಇಂದು ಬೆಳಗ್ಗೆ ಮಧ್ಯಪ್ರದೇಶದ ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

error: Content is protected !!