ರಾಜಸ್ತಾನ : ಕೊಳವೆ ಬಾವಿಗೆ ಬಿದ್ದ 5 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಝಾಲಾವರ್ ಜಿಲ್ಲೆಯಲ್ಲಿ ಸಂಭವಿಸಿದೆ.
32 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕನನ್ನು ಕಲುಲಾಲ್ ಬಗರಿಯಾ ಎಂದು ಗುರುತಿಸಲಾಗಿದೆ.
ಮಧ್ಯಾಹ್ನ 1: 15ರ ಸುಮಾರಿಗೆ ಪ್ರಹ್ಲಾದ್ ಮೈದಾನದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಪೋಷಕರು ಹೊಲದ ಇನ್ನೊಂದು ಬದಿಯಲ್ಲಿ ಕೆಲವು ಕೆಲಸಗಳಲ್ಲಿ ನಿರತರಾಗಿದ್ದಾಗ ಅವನು ಬೋರ್ವೆಲ್ ಬಳಿಯ ಕಲ್ಲಿನ ಚಪ್ಪಡಿ ಮೇಲೆ ಕುಳಿತು ದರಲ್ಲಿ ಜಾರಿ ಬಿದ್ದಿದ್ದಾನೆ ಎಂದು ವರದಿಯಾಗಿದೆ.
ಬಾಲಕ ಕೊಳವೆಬಾವಿಗೆ ಬಿದ್ದ ಕೆಲ ಹೊತ್ತಲ್ಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ಬಾಲಕನಿಗೆ ಪೈಪ್ ಮೂಲಕ ಆಮ್ಲಜನಕ ಪೂರೈಸಲಾಗಿದೆ. ಸತತ 16 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನನ್ನು ಬೋರ್ ವೆಲ್ ನಿಂದ ಮೇಲಕ್ಕೆತ್ತಲಾಗಿದೆ, ಆದರೆ ದುರದೃಷ್ಟವಶಾತ್ ಬಾಲಕ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.