ಬೆಳ್ತಂಗಡಿ: ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿ ಕಾರ್ಯನಿರ್ವಹಿಸಿ ರಾಯಚೂರಿಗೆ ವರ್ಗಾವಣೆಗೊಂಡ ಜುಬಿನ್ ಮೊಹಪತ್ರ ಗುರುವಾಯನಕರೆ ನವಶಕ್ತಿ ಮನೆಗೆ ಭಾನುವಾರ ಭೇಟಿ ನೀಡಿದರು. ಈ ವೇಳೆ ಅವರನ್ನು ಹರೀಶ್ ಶೆಟ್ಟಿ ಹಾಗೂ ರಾಜೇಶ್ ಶೆಟ್ಟಿ ದಂಪತಿಗಳು ಸ್ವಾಗತಿಸಿದರು. ನಂತರ ಬ್ರಹ್ಮಕುಂಭಾಭಿಷೇಕದ ಸಂಭ್ರಮದಲ್ಲಿರುವ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಭೇಟಿ ನೀಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಬ್ರಹ್ಮಕುಂಭಾಭಿಷೇಕ ಸಮಿತಿಯ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ, ಆನುವಂಶಿಕ ಆಡಳಿತ ಮೋಕ್ತೇಸರ ಸುಕೇಶ್ ಕುಮಾರ್ ಕಡಂಬು, ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಪುರಂದರ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಸುನೀಶ್ ಜೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.