ಬೆಂಗಳೂರು: 20 ವರ್ಷದ ಹುಡುಗಿಯ ಸ್ಕೂಟಿ ಫಾಲೋ ಮಾಡಿದ 57 ವರ್ಷದ ಅಂಕಲ್ ನಗದು, ಚಿನ್ನ ಕಳೆದುಕೊಂಡು ಪೊಲೀಸ್ ಠಾಣೆ ಹತ್ತಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸುಂದರಿಯೋರ್ವಳು ಕಂಟ್ರ‍್ಯಾಕ್ಟರ್ ಗೆ ಬಲೆ ಬೀಸಿ ಹನಿಟ್ರಾಪ್ ಮಾಡಿದ್ದಾಳೆ. ಸುಂದರಿ ಅಂಡ್ ಗ್ಯಾಂಗ್ ಮಾಡಿದ್ದ ವಂಚನೆಯ ಹೇಗಿದೆ ನೋಡಿ..
ಆರೋಪಿ ನಯನಾ, ತನ್ನ ಸ್ನೇಹಿತನ ಮೂಲಕ ಸಿವಿಲ್ ಕಂಟ್ರ‍್ಯಾಕ್ಟರ್ ಆಗಿದ್ದ ರಂಗನಾಥ್ ಅವರ ಪರಿಚಯ ಮಾಡಿಕೊಂಡಿದ್ದಾಳೆ. ಪರಿಚಯ ಗೆಳೆತನವಾಗಿ, ಬಳಿಕ ಅವಳಿಗೆ ಆಗಾಗ 5, 10 ಸಾವಿರ ರೂಪಾಯಿ ಹಣವನ್ನು ಕೊಡುತ್ತಿದ್ದರಂತೆ.
ಕಳೆದ ಡಿಸೆಂಬರ್ 9ರಂದು ರಂಗನಾಥ್ ಅವರು ಬೈಕ್‌ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಹಿಂದೆ ಸ್ಕೂಟಿಯಲ್ಲಿ ಬಂದ ನಯನಾ, ರಂಗನಾಥ್ ಅವರನ್ನ ಮಾತನಾಡಿಸಿ, ಬನ್ನಿ ನಮ್ಮ ಮನೆ ಇಲ್ಲೇ ಇದೆ. ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಾಳೆ.
ನಯನಾ ಅವರ ಮಾತು ನಂಬಿದ ಕಂಟ್ರ‍್ಯಾಕ್ಟರ್ ಹುಡುಗಿಯ ಸ್ಕೂಟಿ ಫಾಲೋ ಮಾಡಿಕೊಂಡು ಮನೆಗೆ ಹೋಗಿದ್ದಾರೆ. ಮನೆಗೆ ಹೋದ ಅಂಕಲ್ ಸುಂದರಿ ಜೊತೆ ಜಾಲಿಯಾಗಿದ್ದಾಗ ಪೊಲೀಸರು ಅಂತ ಅಪರಿಚಿತರು ಎಂಟ್ರಿ ಕೊಟ್ಟು, ವ್ಯಭಿಚಾರ ನಡೆಸ್ತಿದ್ದೀರಿ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಆಗಲೇ ನಯನಾ ಮನೆಯಲ್ಲಿ ಕಂಟ್ರ‍್ಯಾಕ್ಟರ್‌ಗೆ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೋ ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಳಗೆ ಮೇಡಂ ಇದ್ದಾರೆ ಇಲ್ಲೇ ಸೆಟಲ್ ಮಾಡಿಕೋ ಅಂತ ಅಂಕಲ್‌ಗೆ ಬೆದರಿಕೆ ಹಾಕಿದ್ದಾರೆ.
ಫೇಕ್ ಪೊಲೀಸರ ಆವಾಜ್‌ಗೆ ಹೆದರಿದ ಕಂಟ್ರ‍್ಯಾಕ್ಟರ್ 29,000 ನಗದು, ಫೋನ್ ಪೇನಲ್ಲಿ 26,000 ಹಾಗೂ ಮೈ ಮೇಲಿದ್ದ ಸುಮಾರು 5 ಲಕ್ಷದ ಚಿನ್ನದ ಸರ, ಉಂಗುರ, ಬ್ರಾಸ್ ಲೇಟ್ ಕೊಟ್ಟಿದ್ದಾರೆ. ಹಣ, ಒಡವೆ ಕಿತ್ತುಕೊಂಡ ನಕಲಿ ಪೊಲೀಸರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಘಟನೆ ಬಗ್ಗೆ ಪೊಲೀಸ್ ಸ್ಟೇಷನ್‌ಗೆ ಕಂಪ್ಲೇAಟ್ ಕೊಡೋಣ ಅಂಕಲ್ ನಯನಾಗೆ ಹೇಳಿದಾಗ ಆಕೆ ಹೊಸ ವರಸೆ ತೆಗೆದಿದ್ದಾಳೆ. ಪೊಲೀಸ್ ಸ್ಟೇಷನ್ ಅಂತ ಹೋದರೆ ಮಗುನಾ ಕರ್ಕೊಂಡು ನಿಮ್ಮ ಮನೆಗೆ ಬರ್ತೀನಿ ಅಂತ ಅಂಕಲ್‌ನ ಮತ್ತೆ ಬ್ಲಾಕ್ ಮೇಲ್ ಮಾಡಿದ್ದಾರೆ.
ಮೊದಲು ಯುವತಿಯ ಮಾತಿಗೆ ಹೆದರಿದ ಕಂಟ್ರ‍್ಯಾಕ್ಟರ್ ಬಳಿಕ ಧೈರ್ಯ ಮಾಡಿ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬAಧ ತನಿಖೆ ನಡೆಸಿದ್ದ ಪೊಲೀಸರು ಸಂತೋಷ್, ಅಜಯ್, ಜಯರಾಜ್ ಎಂಬುವರನ್ನ ಬಂಧಿಸಿದ್ದರು.
ಪ್ರಕರಣ ದಾಖಲು ಆದಾಗಿನಿಂದ ಬೆಂಗಳೂರಿನ ಬೇರೆ ಬೇರೆ ಕಡೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ನಯನ ಈಗ ಬಂಧಿಯಾಗಿದ್ದು, ಆಕೆಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಈ ಗ್ಯಾಂಗ್ ಹನಿಟ್ರ‍್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ.