ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ಸಿಬ್ಬಂದಿಯ ಮೊಬೈಲ್ ಕಳವು: ಪೊಲೀಸರ ತನಿಖೆಯ ಹಾದಿ ತಪ್ಪಿಸೋಕೆ ಖದೀಮರ ಮಾಸ್ಟರ್ ಪ್ಲಾನ್: ಕಳ್ಳತನದಲ್ಲಿ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆ?

ಮಂಗಳೂರು: ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್‌ನಲ್ಲಿ ಜ.17ರಂದು ನಡೆದ ದರೋಡೆ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಖದೀಮರ ಮಾಸ್ಟರ್ ಪ್ಲಾನ್ ಬಯಲಾಗಿದೆ.

ನಿನ್ನೆ ಮಧ್ಯಾಹ್ನ 1.10ಕ್ಕೆ ಕೋಟೆಕಾರು ಸಹಕಾರಿ ಬ್ಯಾಂಕ್‌ಗೆ ನುಗಿದ್ದ ದರೋಡೆಕೋರರು ಕೇವಲ 5 ನಿಮಿಷದಲ್ಲಿ ಹಣದ ಮೂಟೆ ಕಟ್ಟಿಕೊಂಡು ಹೋಗಿದ್ದಾರೆ. ಬಳಿಕ ತನಿಖೆಯ ಹಾದಿ ತಪ್ಪಿಸೋಕೆ ಇವರು ಖತರ್ನಾಕ್ ಪ್ಲಾನ್ ಮಾಡಿದ್ದು, ಓರ್ವ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ನೊಂದಿಗೆ ಪರಾರಿಯಾದ ಕಳ್ಳರು, ಮಂಗಳೂರು ಪೊಲೀಸರು ನಮ್ಮನ್ನ ಟ್ರ‍್ಯಾಕ್ ಮಾಡುತ್ತಾರೆ ಎಂದು ಇಡೀ ನಗರ ಸುತ್ತಿ, ಕದ್ರಿ ರಸ್ತೆ ಬಳಿ ಮೊಬೈಲ್ ಎಸೆದು ಪರಾರಿ ಆಗಿದ್ದಾರೆ. ಆ ಮೊಬೈಲ್ ಅನ್ನು ಪೊಲೀಸರು ಟ್ರ‍್ಯಾಕ್ ಮಾಡಿದಾಗ ಸ್ಫೋಟಕ ಮಾಹಿತಿ ಬಯಲಾಗಿದೆ.

ಬ್ಯಾಂಕ್ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿದ್ದ ಖದೀಮರ ಜೊತೆ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗಿದೆ.

ಖದೀಮರ ಒಂದು ತಂಡ ಮೊಬೈಲ್ ಎಸೆದು ಪರಾರಿಯಾದ ಮೇಲೆ ಬಂಟ್ವಾಳ ರಸ್ತೆಯ ಮೂಲಕ ಕೇರಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೇರಳದ ಟೋಲ್‌ನಲ್ಲಿ ಕಾರು ಪಾಸ್ ಆಗಿರೋದು ಸದ್ಯ ಪತ್ತೆಯಾಗಿದೆ. ಹೀಗಾಗಿ ಮಂಗಳೂರು ಪೊಲೀಸರು ಇದೀಗ ಎರಡು ಕಾರುಗಳ ಬೆನ್ನು ಬಿದ್ದಿದ್ದಾರೆ.

error: Content is protected !!