ಬೆಳ್ತಂಗಡಿ: ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಕರ್ನೊಡಿ ಇಲ್ಲಿಗೆ ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ನೀಡಲಾಯಿತು.
ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಯೋಗೀಶ್ ಅವರ ಮೂಲಕ ಶಾಲೆಗೆ ಹಸ್ತಾಂತರಿಸಿದರು. ಈ ವೇಳೆ ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್, ಪಿಡಿಒ ಶ್ರೀನಿವಾಸ್ ಡಿ.ಪಿ., ಸದಸ್ಯರುಗಳಾದ ದಿನೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ ಎಣಿಂಜೆ, ಗಣೇಶ್ ಆರ್, ಅರವಿಂದ ಕುಮಾರ್, ಚಿದಾನಂದ ಶೆಟ್ಟಿ ಕನ್ನಾಜೆ, ಜಯಂತಿ ಅನ್ನಡ್ಕ, ಆಶಾಲತಾ, ರಜನಿ , ಹರಿಕೃಷ್ಣ, ರೇವತಿ, ಮಹೇಶ್, ಹರೀಶ್ ಕುಲಾಲ್, ಮರಿಯಮ್ಮ, ಸಾರಮ್ಮ ಸೇರಿದಂತೆ ಕಾರ್ಯದರ್ಶಿ ತಾರನಾಥ್ ಕೆ.ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಉಪಸ್ಥಿತರಿದ್ದರು.