ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದುಷ್ಕರ್ಮಿಯೋರ್ವ ಚಾಕುವಿನಿಂದ ದಾಳಿ ಮಾಡಿದ್ದು, ನಟ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ಬೆಳಗಿನ ಜಾವ 2:30 ರ ಸುಮಾರಿಗೆ ದುಷ್ಕರ್ಮಿಯೊಬ್ಬ ಕಳ್ಳತನಕ್ಕೆಂದು ಬಂದಿದ್ದ. ಈ ವೇಳೆ ನಟನಿಗೆ ಆತ 6 ಬಾರಿ ಚಾಕುವಿನಿಂದು ಇರಿದು ಪರಾರಿಯಾಗಿದ್ದಾನೆ.
ಸೈಫ್ ಅಲಿ ಖಾನ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಲೀಲಾವತಿ ಆಸ್ಪತ್ರೆಯ ಸಿಒಒ ಡಾ. ನೀರಜ್ ಉತ್ತಮಣಿ, “ಸೈಫ್ ಅವರ ಮೇಲೆ ಅವರ ಮನೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ಅವರನ್ನು ಲೀಲಾವತಿಯಲ್ಲಿ ಬೆಳಗಿನ ಜಾವ 3:30 ಕ್ಕೆ ಕರೆತರಲಾಯಿತು. ಅವರಿಗೆ ಆರು ಗಾಯಗಳಾಗಿದ್ದು, ಅವುಗಳಲ್ಲಿ ಎರಡು ಆಳವಾಗಿವೆ. ಒಂದು ಗಾಯ ಅವರ ಬೆನ್ನುಮೂಳೆಯ ಹತ್ತಿರದಲ್ಲಿದೆ. ನಾವು ಅವರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದೇವೆ. ನರಶಸ್ತ್ರಚಿಕಿತ್ಸಕ ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞೆ ನಿಶಾ ಗಾಂಧಿ ಅವರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರವೇ ಹಾನಿಯ ಪ್ರಮಾಣವನ್ನು ನಮಗೆ ತಿಳಿಸಲಾಗುವುದು” ಎಂದು ಹೇಳಿದರು.
ಘಟನೆಯ ಕುರಿತು ಮುಂಬೈ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.