ಕಳ್ಳನಿಗೊಂದು ವಿಶೇಷ ಪತ್ರ ಬರೆದ ಮನೆ ಮಾಲೀಕ: ಸಾಮಾಜಿಕ ಜಾಲತಾಣದಲ್ಲಿ ವೈರಲ್..!

ಹೈದರಾಬಾದ್: ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗುವ ಮುನ್ನ ಮನೆ ಮಾಲೀಕರೊಬ್ಬರು ಕಳ್ಳನಿಗೊಂದು ವಿಶೇಷ ಪತ್ರ ಬರೆದಿದ್ದು, ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೆ ಖಾಲಿಯಾಗಿದೆ ಎಂದು ಹಬ್ಬದ ದಿನ ಖನ್ನ ಹಾಕುವ ವ್ಯರ್ಥ ಪ್ರಯತ್ನ ನಡೆಸದಂತೆ ಕೈ ಬರಹದಲ್ಲಿ ಪತ್ರವೊಂದನ್ನು ಬರೆದು ಮನೆ ಮಾಲೀಕ, ಮನೆಯ ಮುಂದೆ ಅಂಟಿಸಿ ಹೋಗಿದ್ದಾರೆ. ಈ ಮೂಲಕ ಕಳ್ಳರು, ಹಣ, ಒಡವೆ ಆಸೆಗೆ ವ್ಯರ್ಥ ಪ್ರಯತ್ನ ನಡೆಸದಂತೆ ಕಿವಿಮಾತನ್ನೂ ಹೇಳಿದ್ದಾರೆ. ಹಾಗಾದ್ರೆ ಆ ಪತ್ರದಲ್ಲಿ ಬರೆದಿರೋದು ಏನು ಅಂತಿರಾ..?

“ನಾವು ಸಂಕ್ರಾಂತಿಗೆ ಊರಿಗೆ ಹೋಗುತ್ತಿದ್ದೇವೆ. ಹೋಗುವಾಗ ಮನೆಯಲ್ಲಿದ್ದ ಆಭರಣ ಮತ್ತು ಹಣ ಕೊಂಡೊಯ್ಯುತ್ತಿದ್ದೇವೆ. ಹಾಗಾಗಿ ನಮ್ಮ ಮನೆಗೆ ಬರಬೇಡಿ. ನಿಮ್ಮ ಹಿತೈಷಿ” ಎಂದು ಬರೆಯಲಾಗಿದೆ.

ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ್ದಲ್ಲದೆ ಹಾಸ್ಯಕ್ಕೂ ಕಾರಣವಾಗಿದೆ. ಅಲ್ಲದೆ ಈ ಕ್ರಿಯಾತ್ಮಕ ಯೋಜನೆ ಹಾಗೂ ಚಾಲಕಿತನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

error: Content is protected !!