ಅಪಘಾತಕ್ಕೀಡಾದ ಗಾಯಾಳು ವ್ಯಕ್ತಿಗೆ ಸಹಾಯ ಮಾಡಿದರೆ 25,000ರೂ. ಬಹುಮಾನ..!: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ

ಹೊಸದಿಲ್ಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಬಳಿ ಯಾರೂ ಬೇಗ ಹೋಗೋದೆ ಇಲ್ಲ. ಈ ಘಟನೆಯಲ್ಲಿ ಮುಂದೆ ಕೋರ್ಟ್, ಕೇಸ್ ಎಂದು ಅಲೆದಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ಜನ ಘಟನೆಯನ್ನು ಕಣ್ಣಾರೆ ಕಂಡರೂ, ತಕ್ಷಣಕ್ಕೆ ಗಾಯಾಳುಗಳಿಗೆ ಸ್ಪಂದಿಸೋದಿಲ್ಲ. ಹೀಗಾಗಿಯೇ ಅನೇಕರು ರಸ್ತೆಯಲ್ಲೇ ಪ್ರಾಣ ಕಳೆದುಕೊಳ್ಳುತ್ತಾರೆ.

ಈ ಬಗ್ಗೆ ಎಚ್ಚರ ವಹಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಪಘಾತಕ್ಕೀಡಾದ ಗಾಯಾಳು ವ್ಯಕ್ತಿಗೆ ಸಹಾಯ ಮಾಡಿದ ಪರೋಪಕಾರಿಗಳಿಗೆ 25,000ರೂ. ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ನಾಗಪುರದಲ್ಲಿ ರಸ್ತೆ ಸುರಕ್ಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪಘಾತವಾದಾಗ ಮೊದಲ 1 ಗಂಟೆ ನಿರ್ಣಾಯಕವಾಗಿದ್ದು, ಆ ಅವಧಿಯಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವ ವ್ಯಕ್ತಿಗೆ ಈಗ ನೀಡುತ್ತಿರುವ 5 ಸಾವಿರ ರೂ. ಬಹುಮಾನ ಸಾಲುತ್ತಿಲ್ಲ. ಹೀಗಾಗಿ ಇವರಿಗೆ 25 ಸಾವಿರ ರೂ. ನೀಡಲಾಗುವುದು ಎಂದಿದ್ದಾರೆ.

ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳವರೆಗೆ 1.5 ಲಕ್ಷ ರೂ.ವರೆಗಿನ ಆಸ್ಪತ್ರೆ ವೆಚ್ಚವನ್ನು ಸಹ ಕೇಂದ್ರ ಸರಕಾರ ಭರಿಸಲಿದೆ. ಇದು ರಾಜ್ಯ ಹೆದ್ದಾರಿ­ಗಳಲ್ಲಿ ಗಾಯಗೊಂಡವರಿಗೆ ಅನ್ವಯಿಸುತ್ತದೆ ಎಂದರು.

error: Content is protected !!