ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಆರೋಪಿ ಸೈಯದ್ ನಸ್ರು ಮನಸ್ಥಿತಿ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.
ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕ ನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ಬೆಂಗಳೂರು ಇತಿಹಾಸದಲ್ಲೇ ನೀಚ ಕೃತ್ಯ ಎಸಗಿದ್ದಾನೆ.
ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ, ಈತನ ನಡವಳಿಕೆಯಿಂದ ಶಾಕ್ ಆಗಿದೆ. ಈತ ಸ್ನಾನ ಮಾಡುತ್ತಿದ್ದದ್ದು ಮಾತ್ರ ವಾರಕ್ಕೊಮ್ಮೆ. ಈತನಿಗೆ ಹಿಂದಿ ಭಾಷೆ ಕೂಡ ಬರುವುದಿಲ್ಲ. ತಾನೆಲ್ಲಿದ್ದಿನಿ, ಇದು ಯಾವ ಊರು ಎನ್ನುವುದು ಕೂಡ ಗೊತ್ತಿಲ್ಲವಂತೆ. ಕೇವಲ ಲುಂಗಿ ಉಟ್ಕೊಳ್ತಿದ್ದ ಈ ವಿಚಿತ್ರ ಪ್ರಾಣಿ ಒಳ ಉಡುಪು ಕೂಡ ಧರಿಸೋದಿಲ್ಲವಂತೆ. ಅಲ್ಲದೇ ತನ್ನ ತಲೆ ಕೂದಲನ್ನ ತಾನೆ ಬೋಳಿಸಿಕೊಳ್ಳುತ್ತಿದ್ದ. ಜೊತೆಗೆ ಅತಿಹೆಚ್ಚಾಗಿ ನೀಲಿ ಚಿತ್ರಗಳನ್ನ ನೋಡುತ್ತಿದ್ದನಂತೆ. ಒಂದು ವರ್ಷದ ಹಿಂದೆ ಕೂಡ ಹಸುಗಳ ಜೊತೆಗೆ ವಿಚಿತ್ರವಾಗಿ ನಡೆದುಕೊಂಡಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಕುಡಿದ ಮತ್ತಲ್ಲಿದ್ದ ಈ ಕ್ರೂರಿ ಹಸುವಿನ ಕೆಚ್ಚಲಿಗೆ ಚಾಕು ಹಾಕಿದ್ದು, 3 ಹಸುಗಳು ರಾತ್ರಿ ನೋವಿನಲ್ಲಿ ನರಳಾಡಿದೆ. ಸದ್ಯ ಮೂರು ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಬಂಧನ ವಿಚಾರ ತಿಳಿದು ಪ್ರತಿಕ್ರಿಯಿಸಿರುವ ಹಸುವಿನ ಮಾಲೀಕ ಕರ್ಣ, ಆರೋಪಿಯನ್ನ ಈಗ ಮೆಂಟಲ್ ಎಂದು ಹೇಳುತ್ತಿದ್ದಾರೆ. ಮೆಂಟಲ್ ಆಗಿದ್ರೆ ಹೇಗೆ ಈ ಕೃತ್ಯ ಎಸಗುತ್ತಿದ್ದ. ಮೊದಲು ಅಂಗಡಿ ಮಾಲೀಕನನ್ನ ಅರೆಸ್ಟ್ ಮಾಡಬೇಕು. ಮೆಂಟಲ್ ಈ ರೀತಿ ಮಾಡೋದಕ್ಕೆ ಸಾಧ್ಯ ನಾ? ಅಲ್ಲದೇ ಕೃತ್ಯ ಮುಂಜಾನೆ ನಡೆದಿದೆ. ಆಗ ಯಾವ ಬಾರ್ ಓಪನ್ ಇರುತ್ತೆ. ಬ್ಯಾಗ್ ಅಂಗಡಿಯವನಿಗೆ ಹಸುವಿನಿಂದ ತೊಂದರೆ ಆಗ್ತಿತ್ತು ಅನಿಸುತ್ತೆ. ಅದಕ್ಕೆ ಈ ಕೃತ್ಯ ಮಾಡಿಸಿರಬೇಕು ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಕೃತ್ಯ ಒಬ್ಬನೇ ಮಾಡೋದಕ್ಕೆ ಸಾಧ್ಯ ಇಲ್ಲ. ಇದರ ಹಿಂದೆ ಯಾರೋ ಇದ್ದಾರೆ. ಆರೋಪಿಯನ್ನ ತನಿಖೆಗೆ ಒಳಪಡಿಸದೇ ಒಂದೇ ದಿನಕ್ಕೆ ತರಾತುರಿಯಲ್ಲಿ ಜೈಲಿಗೆ ಹಾಕಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಹೆತ್ತ ತಾಯಿಯ ಎದೆ ಹಾಲು ಕುಡಿದಿವನು ಹಸುವಿನ ಎದೆ ಬಗೆದಿದ್ದಾನಲ್ಲ ಎಂದು ಮರುಗಿದ್ದಾರೆ.