ಮೂರು ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ಕುಂದಾಪುರ ತಿರುಗೇಟು..!

ಬೆಂಗಳೂರು: ಮೂರು ಹಸುಗಳ ಕೆಚ್ಚಲು ಕತ್ತರಿಸಿ, ಕಾಲಿಗೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕ ನಗರದಲ್ಲಿ ಸಂಭವಿಸಿದ್ದು ಪ್ರಕರಣ ಸಂಬಂಧ ಹೇಳಿಕೆ ಕೊಟ್ಟ ಜಮೀರ್ ಅಹ್ಮದ್ ಅವರಿಗೆ ಚೈತ್ರಾ ಕುಂದಾಪುರ ತಿರುಗೇಟು ಕೊಟ್ಟಿದ್ದಾರೆ.

‘ತಪ್ಪು ಮಾಡಿದವರು ಯಾರೇ ಆಗಿರಲಿ, ಅವರಿಗೆ ಶಿಕ್ಷೆ ಆಗಬೇಕು. ಈಗ ಆ ಹಸು ಹಾಲು ಕೊಡಲು ಸಾಧ್ಯವಾಗಲ್ಲ. ಮಾಲೀಕರಿಗೆ ಬೇರೆ ಹಸು ಕೊಡಿಸುತ್ತೇವೆ’ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ಇದಕ್ಕೆ ಚೈತ್ರಾ ಕುಂದಾಪುರ ಪ್ರತಿಕ್ರಿಯಿಸಿದ್ದು, ‘ಗೋವು ಜೊತೆ ನಮಗೆ ಅವಿನಾಭಾವ ಸಂಬಂಧ ಇದೆ. ಧಾರ್ಮಿಕ ನಂಬಿಕೆಗಳು ಕೂಡ ಇವೆ. ಒಂದಕ್ಕೆ ಇನ್ನೊಂದು ಹಸು ಕೊಟ್ಟರೆ ನ್ಯಾಯ ಸಿಕ್ಕಂತೆ ಆಗಲ್ಲ. ಈ ಕೃತ್ಯ ಇನ್ನೊಮ್ಮೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

error: Content is protected !!