ಬೆಳ್ತಂಗಡಿ : ತ್ರಿ ಸ್ಟಾರ್ ವೈನ್ಸ್ ಶಾಪ್ ಕಳ್ಳತನ ಪ್ರಕರಣ: ಪ್ರಮುಖ ಆರೋಪಿ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ: ಕಳ್ಳತನ ನಡೆಸಿದ ವೈನ್ಸ್ ಶಾಪ್ ಗೆ ಕರೆತಂದು ಮಹಜರು

 

ಬೆಳ್ತಂಗಡಿ : ಶ್ರೀ ಗುರುನಾರಾಯಣ ಕಟ್ಟಡದ ನೆಲ ಮಹಡಿಯಲ್ಲಿರುವ ತ್ರಿ ಸ್ಟಾರ್ ವೈನ್ಸ್ ನ ಬೀಗ ಒಡೆದು ಸುಮಾರು 9 ಸಾವಿರ ನಗದು ಸೇರಿದಂತೆ ಬಿಯಾರ್ ಬಾಟಲಿ ಗಳನ್ನು ಕಳ್ಳತನ ಮಾಡಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ಪೈಕಿ ಪ್ರಮುಖ ಆರೋಪಿಯನ್ನು ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ಆ.13 ರಂದು ಭಾನುವಾರ ರಾತ್ರಿ ನಡೆದ ಕಳ್ಳತನದ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕುಂದಾಪುರ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದಲ್ಲಿ ಉಡುಪಿಯ ಹಿರಿಯಡ್ಕ ಜೈಲಿನಲ್ಲಿದ್ದು, ಬೆಳ್ತಂಗಡಿ ಪೊಲೀಸರು ಕಳ್ಳತನ ಪ್ರಕರಣದ ತನಿಖೆಗಾಗಿ ಪ್ರಮುಖ ಆರೋಪಿಯಾದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್ (22) ಎಂಬಾತನನ್ನು ಬೆಳ್ತಂಗಡಿ ಕೋರ್ಟ್ ನಿಂದ ಬಾಡಿ ವಾರೆಂಟ್ ಪಡೆದು ಜ.13 ರಂದು ಬೆಳಗ್ಗೆ ಉಡುಪಿಯ ಹಿಡಿಯಡ್ಕ ಜೈಲಿನಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯ ಆರೋಪಿಯನ್ನು ಜ.13 ಮತ್ತು ಜ.14 ರಂದು ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಮಾಡಿದೆ. ಆರೋಪಿಯನ್ನು ಪೊಲೀಸರು ಕಳ್ಳತನ ಮಾಡಿದ ವೈನ್ಸ್ ಶಾಪ್ ಗೆ ಕರೆತಂದು ಮಹಜರು ನಡೆಸಿದರು.

error: Content is protected !!