ನಿಯಂತ್ರಣ ತಪ್ಪಿದ ಕಾರು, ಕೆರೆ ಕಟ್ಟೆಗೆ ಡಿಕ್ಕಿ: ಯುವ ಪತ್ರಕರ್ತ ಭರತ್ ಧಾರುಣ ಸಾವು..!

 

ಚಿಕ್ಕಬಳ್ಳಾಪುರ: ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಪತ್ರಕರ್ತ ಜಿ. ಎಸ್. ಭರತ್ (34) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಚಹಳ್ಳಿ ಕೆರೆ ಬಳಿ ಸಂಭವಿಸಿದೆ.

ಬೆಂಗಳೂರಿನಲ್ಲಿ ವಾಸವಿದ್ದ ಗುಡಿಬಂಡೆ ಪಟ್ಟಣ ಮೂಲದ ಭರತ್, ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ವರದಿಗಾರರಾಗಿದ್ದರು. ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಹಲವು ವರದಿಗಳ ಮೂಲಕ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಮಾಡಿದ್ದರು. ಕಳೆದ ದಿನವಷ್ಟೇ ಅನ್ನಭಾಗ್ಯ ಯೋಜನೆ ಬಗ್ಗೆ ಪತ್ರಿಕೆಯಲ್ಲಿ ವಿಶೇಷ ವರದಿ ಮಾಡಿ ಗಮನ ಸೆಳೆದಿದ್ದರು.

 

ಜ.12ರ ರಾತ್ರಿ ಗುಡಿಬಂಡೆಯಿಂದ ಬಾಗೇಪಲ್ಲಿ ಕಡೆಗೆ ತೆರಳುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಾಚಹಳ್ಳಿ ಕೆರೆ ಕಟ್ಟೆಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಕಾರಿನ ಏರ್ ಬ್ಯಾಗ್ ಓಪನ್ ಆದರೂ ಕೂಡ ಚಾಲಕನ ಜೀವ ಉಳಿದಿಲ್ಲ.

ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

error: Content is protected !!