ಹರೀಶ್ ಪೂಜಾರಿ ಸಿರಿಲ್ ಸಿಕ್ವೇರಾ
ಬೆಳ್ತಂಗಡಿ: ಪಣಕಜೆ ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಪಣಕಜೆ ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡು, ಇಂದು ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಿರಿಲ್ ಸಿಕ್ವೇರಾರವರು ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಘದ ನಿರ್ದೇಶಕರಾಗಿ ಪದ್ಮನಾಭ ಶೆಟ್ಟಿ, ಲೂಸಿ ಡಿ ಸೋಜಾ, ಗಣೇಶ್ ಪ್ರಭು, ಮೈಕಲ್ ಡಿ ಸೋಜಾ, ಅರುಣ್ ಬಂಗೇರ, ದಿನೇಶ್ ಪ್ರಭು, ಕೇಶವ ಮೂಲ್ಯ, ಭವ್ಯ, ಚಂದ್ರ ಮತ್ತು ಶಿವರಾಜ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.