ಮಂಗಳೂರು: ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ’ದಲ್ಲಿ ಸಿನಿ ಪ್ರಿಯರಿಗೆ ಹಲವು ಸಿನಿಮಾಗಳನ್ನು ಉಚಿತವಾಗಿ ನೋಡುವ ಅವಕಾಶವಿದೆ.
ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಜನವರಿ 2 ಮತ್ತು 3ರಂದು ಮಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್ ಆಯೋಜಿಸಲಾಗಿದ್ದು, ಮಲ್ಟಿಫ್ಲೆಕ್ಸ್ನಲ್ಲಿ ಜನವರಿ 2ರಂದು 10 ಗಂಟೆಗೆ ಅರಿಷಡ್ವರ್ಗ ಕನ್ನಡ ಸಿನಿಮಾ, 12.30ಕ್ಕೆ 19,20,21 ಕನ್ನಡ ಸಿನಿಮಾ, 3.30ಕ್ಕೆ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ, 6.30ಕ್ಕೆ ಮಧ್ಯಂತರ ಕನ್ನಡ ಶಾರ್ಟ್ ಫಿಲ್ಮ್, 8 ಗಂಟೆಗೆ ಕಾಂತಾರ ಕನ್ನಡ ಸಿನಿಮಾ ಪ್ರದರ್ಶನವಾಗಲಿದೆ.
ಜನವರಿ 3ರಂದು 10.15ಕ್ಕೆ ಸಾರಾಂಶ ಕನ್ನಡ ಸಿನಿಮಾ, 12.45ಕ್ಕೆ ತರ್ಪಣ ಕೊಂಕಣಿ ಸಿನಿಮಾ, 3.15ಕ್ಕೆ ಶುದ್ದಿ ಕನ್ನಡ ಸಿನಿಮಾ, 5.45ಕ್ಕೆ ಕುಬಿ ಮತ್ತು ಐಲಾ ಕನ್ನಡ ಸಿನಿಮಾ ರಾತ್ರಿ 8 ಗಂಟೆಗೆ ಗರುಡ ಗಮನ ವೃಷಭ ವಾಹನ ಕನ್ನಡ ಸಿನಿಮಾ ಪ್ರಸಾರವಾಗಲಿದೆ.