ಬೆಳ್ತಂಗಡಿ: ನಗರದ ಮುಖ್ಯ ರಸ್ತೆಯ ಮೂರು ಮಾರ್ಗದ ಬಳಿ ಹೊಸ ಹೈ ಮಾಸ್ಟ್ ಲೈಟ್ ಅಳವಡಿಸಲಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಮೂರು ಮಾರ್ಗದ ಬಳಿ ಹೈ ಮಾಸ್ಟ್ ಲೈಟ್ ಹಾಳಾಗಿ ನೇತಾಡುವ ರೀತಿಯಲ್ಲಿ ಇರುವ ಬಗ್ಗೆ “ಪ್ರಜಾಪ್ರಕಾಶ ನ್ಯೂಸ್,” ವರದಿ ಮಾಡಿತ್ತು. ವರದಿ ಪ್ರಕಟವಾದ ಕೂಡಲೇ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಸ್ಪಂದಿಸಿ ತಕ್ಷಣ ಅಪಾಯದ ರೀತಿಯಲ್ಲಿದ್ದ ಲೈಟ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಕೆಲವೇ ದಿನಗಳಲ್ಲಿ ಹೊಸ ಲೈಟ್ ಅಳವಡಿಸುವ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ಗೆ ಭರವಸೆ ನೀಡಿದ್ದರು. ಅದರಂತೆ ಹೊಸ ಹೈ ಮಾಸ್ಟ್ ಲೈಟ್ ಅಳವಡಿಸಲಾಗಿದೆ.
ಇದನ್ನೂ ಓದಿ: