ಪಿಲಿಗೂಡು: ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆ 7 ದಿನಗಳ ಶೋಕಾಚರಣೆ ಜಾರಿ ಹಿನ್ನೆಲೆ ಡಿ.31ರಂದು ನಿಗದಿಯಾಗಿದ್ದ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಜ.5ಕ್ಕೆ ಮುಂದೂಡಲಾಗಿದೆ.
ಸರಕಾರದ ಅಧಿಸೂಚನೆ ಲಭಿಸಿದ ಹಿನ್ನೆಲೆ ವಾರ್ಷಿಕೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ ತುರ್ತು ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿತು ಎಂದು ಶಾಲೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.