ಬೆಳ್ತಂಗಡಿ: ಜ.03 – 05 ಅಯ್ಯಪ್ಪ ಸ್ವಾಮಿಯ ಸುವರ್ಣ ದೀಪೋತ್ಸವ: ಧಾರ್ಮಿಕ ಸಭೆ, “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ

ಬೆಳ್ತಂಗಡಿ:  ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ), ಹಾಗೂ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ 50 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಸುವರ್ಣ ದೀಪೋತ್ಸವ ಜ 03 ಮತ್ತು 05ರವರೆಗೆ ಅಯ್ಯಪ್ಪ ದೇವಸ್ಥಾನ ರಾಮನಗರ ಸಂತೆಕಟ್ಟೆಯಲ್ಲಿ ನಡೆಯಲಿದೆ.

ಜ.03 ಶುಕ್ರವಾರ ಬೆಳಿಗ್ಗೆ 6.30 ರಿಂದ ಗಣಹೋಮ ಆರಂಭವಾಗಲಿದ್ದು, 9 ಗಂಟೆಗೆ ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಶಿಖಾಮಣಿ ಆಡಳಿತ ಮೊಕ್ತೇಸರರು ಅಯ್ಯಪ್ಪ ಸ್ವಾಮಿ ದೇವಸ್ಥಾನ ವೈಯಾಲಿಕಾವಲ್ ಬೆಂಗಳೂರು, ಶಿವಪ್ರಸಾದ್ ಅಜಿಲ, ಇ.ಇ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಇವರು ದೀಪೋತ್ಸವ ಉದ್ಘಾಟನೆ ನೆರವೇರಿಸಲಿದ್ದಾರೆ.
10 ಗಂಟೆಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1-00ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ ಧಾರ್ಮಿಕ ಸಭೆ ನಡೆಯಲಿದ್ದು, ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಬರೋಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಸಂತ ಪೈ ಉದ್ಯಮಿಗಳು ಬದಿಯಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ನಾರಾಯಣ ಬೇಗೂರು, ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ, ಧನಂಜಯ ರಾವ್ ವಕೀಲರು ಬೆಳ್ತಂಗಡಿ, ಭಾಗವಹಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧಕ್ಷತೆ ವಹಿಸಲಿದ್ದಾರೆ.

ರಾತ್ರಿ 9.30 ರಿಂದ ಕಲಾ ಸಂಗಮ ಕಲಾವಿದರಿಂದ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ.

ಜ.04 ಬೆಳಿಗ್ಗೆ 6.30 ಕ್ಕೆ ಮಹಾಗಣಪತಿ ದೇವರಿಗೆ ಅಥರ್ವ ಶೀರ್ಷಾಭಿಷೇಕ ,ಅಯ್ಯಪ್ಪ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6 ಗಂಟೆಗೆ ಲಾಯಿಲ ವೆಂಕಟರಮಣ ದೇವಸ್ಥಾನದ ಬಳಿಯಿಂದ ಪಾಲಾಶ ಕೊಂಬೆಯ ಮೆರವಣಿಗೆ 7 ರಿಂದ ಮೂಡಪ್ಪ ಸೇವೆ, ಶನೈಶ್ಚರ ದೇವರಿಗೆ ಕಲ್ಪೋಕ್ತ ಪೂಜೆ, ಸತ್ಯದೇವತೆಗೆ ತಂಬಿಲ ಸೇವೆ, ದೀಪಾರಾಧನೆ, ರಾತ್ರಿ 9 ಗಂಟೆಯಿAದ ಹಿರಿಯಡ್ಕ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಜ 05 ಬೆಳಿಗ್ಗೆ 4 ಗಂಟೆಗೆ ಕೆಂಡ ಸೇವೆ , ಭಜನಾ ಸೇವೆ ಮಹಾಪೂಜೆ ನಡೆಯಲಿದೆ. ರಾತ್ರಿ 8 ಗಂಟೆಗೆ ಸತ್ಯ ದೇವತೆಗೆ ನೇಮೋತ್ಸವ ನಡೆಯಲಿದೆ.

error: Content is protected !!