ನೇತಾಡುತಿದ್ದ ಅಪಾಯಕಾರಿ ಹೈಮಾಸ್ಟ್ ಲೈಟ್ ತೆರವು: “ಪ್ರಜಾಪ್ರಕಾಶ ನ್ಯೂಸ್” ವರದಿಗೆ ಸ್ಪಂದಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತ್:

 

 

ಬೆಳ್ತಂಗಡಿ: ನಗರದ ಮೂರು ಮಾರ್ಗದ ಬಳಿ ಹೈಮಾಸ್ಟ್ ಲೈಟ್ ನೇತಾಡುವ ಸ್ಥಿತಿಯಲ್ಲಿರುವ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವರದಿ ಪ್ರಕಟಿಸಿದ್ದು. ವರದಿ ಪ್ರಕಟವಾದ ಕೆಲವೇ ತಾಸುಗಳಲ್ಲಿ   ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಪಂದಿಸಿ ಹೈಮಾಸ್ಟ್ ಲೈಟ್ ತೆರವುಗೊಳಿಸಿದೆ.

 

 

 

 

ಕಳೆದ ಕೆಲವು ದಿನಗಳಿಂದ ಮೂರು ಮಾರ್ಗದ ಬಳಿಯ ಮುಖ್ಯ ರಸ್ತೆಯ ಬದಿಯಲ್ಲಿರುವ ಹೈಮಾಸ್ಟ್ ಲೈಟ್ ನ ಒಂದು ಬದಿಯ ಸ್ಟೇ ಕೇಬಲ್ ತುಂಡಾಗಿ ನೇತಾಡಿಕೊಂಡು ಬೀಳುವ ರೀತಿಯಲ್ಲಿ ಕಾಣುತ್ತಿರುವ ಅಪಾಯದ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ವಿಸ್ತೃತ ವರದಿಯನ್ನು ಗುರುವಾರ ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದ  ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರು ತಕ್ಷಣ ಕಾರ್ಯಪೃವೃತ್ತರಾಗಿ  ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ ಹೈಮಾಸ್ಟ್ ಲೈಟ್ ತೆರವುಗೊಳಿಸಲಾಗಿದೆ. ಕೆಲವೇ ದಿನಗಳಲ್ಲಿ   ಹೊಸ ಲೈಟ್ ಅಳವಡಿಸಲಾಗುವುದು ಎಂದು  ಅಧ್ಯಕ್ಷರಾದ ಜಯಾನಂದ ಗೌಡ ಅವರು ಪ್ರಜಾ ಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

 

ಇದನ್ನೂ ಓದಿ:

 

ಬೆಳ್ತಂಗಡಿ ನಗರದಲ್ಲಿ ನೇತಾಡುತ್ತಿದೆ, ಹೈಮಾಸ್ಟ್ ಲೈಟ್: ಅಪಾಯದ ಸ್ಥಿತಿಯಲ್ಲಿದ್ದರೂ ದುರಸ್ತಿಗೊಳಿಸದ ಅಧಿಕಾರಿಗಳು:

 

 

error: Content is protected !!