ಹುಬ್ಬಳ್ಳಿ: ಅಚ್ಚವ್ವನ ಕಾಲೋನಿಯಲ್ಲಿ ಡಿ.22ರ ರಾತ್ರಿ ಸಂಭವಿಸಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 9 ಅಯ್ಯಪ್ಪ ಮಾಲಾಧಾರಿಗಳಲ್ಲಿ ಇಬ್ಬರು ಮಾಲಾಧಾರಿಗಳು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಭಾನುವಾರ ರಾತ್ರಿ ಅಯ್ಯಪ್ಪಸ್ವಾಮಿ ವೃತಾಧಾರಿಗಳು ಪೂಜೆ ಸಲ್ಲಿಸಿ ರಾತ್ರಿ ನಿದ್ರೆಗೆ ಜಾರಿದಾಗ ದೀಪವು ಸಿಲಿಂಡರ್ ಗೆ ತಾಗಿ ಅಗ್ನಿ ಅವಘಡ ಸಂಭವಿಸಿದ್ದು ಕೋಣೆಯ ತುಂಬಾ ಬೆಂಕಿ ಆವರಿಸಿಕೊಂಡಿತ್ತು.
ಘಟನೆಯಲ್ಲಿ ರಾಜು ಹರ್ಲಾಪುರ (21), ವಿನಾಯಕ ಬಾತಕೇರ (12), ಪ್ರಕಾಶ ಬಾರಕೇರ (42), ಮಂಜು ತೋರದ (22), ಪ್ರವೀಣ ಚಲವಾದಿ (24), ತೇಜಸ್ ರೆಡ್ಡಿ (26) ಮತ್ತು ಶಂಕರ ರಾಯನಗೌಡ್ರ (29) ಅಜ್ಜಾಸ್ವಾಮಿ ಉರ್ಪ್ ನಿಂಗಪ್ಪ ಬೇಪಾರಿ(58), ಹಾಗೂ ಸಂಜಯ ಸವದತ್ತಿ (20) ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳುಳನ್ನು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಮುಂಜಾನೆ ಅಜ್ಜಾಸ್ವಾಮಿ ಉರ್ಪ್ ನಿಂಗಪ್ಪ ಬೇಪಾರಿ(58), ಹಾಗೂ ಸಂಜಯ ಸವದತ್ತಿ (20) ಎಂಬವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ 7 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳ ಪ್ರಾಣ ಉಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬೆಂಗಳೂರಿನಿAದ ಮೂವರು ವೈದ್ಯಾಧಿಕಾರಿಗಳನ್ನು ಕರೆಸಿಕೊಂಡು ಚಿಕಿತ್ಸೆಕೊಡಿಸಿದ್ದರು.