ಪತ್ತನಂತಿಟ್ಟ, ಕೇರಳ: ಶಬರಿಮಲೆಯಲ್ಲಿ ಭಕ್ತಾಧಿಗಳ ಹೆಚ್ಚುತ್ತಿದ್ದು ಸಂಚಾರ ದಟ್ಟಣೆ ನಿಯಂತ್ರಣ ಸೇರಿದಂತೆ ಕ್ಷೇತ್ರವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಭಕ್ತಾದಿಗಳ ವಸತಿ, ಭದ್ರತೆ ಮತ್ತು ಸರತಿ ಸಾಲು ನಿರ್ವಹಣೆಯೇ ದೊಡ್ಡ ಸಾಹಸವಾಗಿದ್ದು ದೇವಸ್ಥಾನದ ಸಮಯ, ಮಾರ್ಗದ ವಿವರ ಮತ್ತು ಯಾತ್ರಾರ್ಥಿ ಗುಂಪುಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲದಿದ್ದರೆ ಭಕ್ತರು ಗೊಂದಲಕ್ಕೊಳಗಾಗುತ್ತಾರೆ. ಹೀಗಾಗಿ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ದೇವಸ್ಥಾನ ಮಂಡಳಿ ತಂತ್ರಜ್ಞಾನದ ನೆರವು ಪಡೆದುಕೊಳ್ಳಲು ಈಗಾಗಲೇ ವ್ಯವಸ್ಥೆ ಮಾಡಿದೆ.
ಶಬರಿಮಲೆ ಭಕ್ತರಿಗೆ ‘ಸ್ವಾಮಿ’ ಎಐ ಚಾಟ್‌ಬಾಟ್ ನೆರವು ನೀಡಲಿದೆ. ಬಹು ಭಾಷೆಗಳಲ್ಲಿ ಸೇವೆಗಳನ್ನು ನೀಡುವ ಈ ತಂತ್ರಜ್ಞಾನವನ್ನು ನವೆಂಬರ್ 13 ರಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅನಾವರಣಗೊಳಿಸಿದರು. ಎಲ್ಲ ಭಕ್ತರನ್ನು ತಲುಪಲು ಮಾಧ್ಯಮಗಳು, ಎಫ್‌ಎಂ ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡಲಾಗಿದೆ. ಐದು ವಾರಗಳಲ್ಲಿ 1.5 ಲಕ್ಷ ಭಕ್ತರಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಚಾಟ್‌ಬಾಟ್‌ನ ಉದ್ದೇಶವು ಭಕ್ತರಿಗೆ ಪ್ರಮುಖ ಮತ್ತು ನಿಖರವಾದ ಮಾಹಿತಿ ಒದಗಿಸುವುದಾಗಿದೆ.
ಭಾಷಾ ಸಮಸ್ಯೆಗಳೂ ಸೇರಿದಂತೆ ಇತರ ಸವಾಲುಗಳನ್ನು ನಿವಾರಿಸಲು, ಪತ್ತನಂತಿಟ್ಟ ಜಿಲ್ಲಾಧಿಕಾರಿ ಪ್ರೇಮ್ ಕೃಷ್ಣನ್ ನೇತೃತ್ವದಲ್ಲಿ ವಾಟ್ಸಾಪ್ ಆಧಾರಿತ ಎಐ ಚಾಟ್‌ಬಾಟ್ ಸೇವೆ ಲಭ್ಯವಾಗುವಂತೆ ಮಾಡಲಾಗಿದೆ.