ಅಯ್ಯಪ್ಪಸ್ವಾಮಿ ವ್ರತಧಾರಿಗಳು ಮಲಗಿದ್ದ ಶಿಬಿರದಲ್ಲಿ ಅಗ್ನಿ ಅವಘಡ ಸಂಭವಿಸಿ ಒಂಬತ್ತು ಮಂದಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ಡಿ.22ರಂದು ರಾತ್ರಿ ಸಂಭವಿಸಿದೆ.
ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರವಿವಾರ ಪೂಜೆ ಸಲ್ಲಿಸಿ ರಾತ್ರಿ ನಿದ್ರೆಗೆ ಜಾರಿದಾಗ ದೀಪವು ಸಿಲಿಂಡರ್ ಗೆ ತಾಗಿ ಅಗ್ನಿ ಅವಘಡ ಸಂಭವಿಸಿದ್ದು ಕೋಣೆಯ ತುಂಬಾ ಬೆಂಕಿ ಆವರಿಸಿಕೊಂಡಿದೆ.
ಘಟನೆಯಲ್ಲಿ ಗಾಯಗೊಂಡವರು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.