ಹೊಸದಿಲ್ಲಿ: ಸಿಕ್ಕಾ, ಸಿಕ್ಕಾ ವಿಷಯಗಳನ್ನು ಕಂಟೆಂಟ್ ಮಾಡಿಕೊಂಡು ಯೂಟ್ಯೂಬ್ ನಲ್ಲೇ ಜೀವನ ಕಳೆಯೋರು, ಹೊಸ ಚಾನೆಲ್ ಆರಂಭಿಸಿ ಯೂಟ್ಯೂಬರ್ ಆಗ್ಬೇಕು ಅನ್ನೋರು ಈ ಹೊಸ ವಿಷಯ ತಿಳಿದುಕೊಳ್ಳಲೇ ಬೇಕು. ಇದು ಕಂಟೆಂಟ್ ಕ್ರಿಯೇಟರ್ಸ್ ಗೆ ಯೂಟ್ಯೂಬ್ ಒಡೆತನ ಹೊಂದಿರುವ ಗೂಗಲ್ ನೀಡಿರೋ ಎಚ್ಚರಿಕೆ.
ಹೆಚ್ಚು ಲೈಕ್‌ಗಳು, ವಿವ್ಯೂಸ್ ಗೆ ಕಂಟೆಂಟ್ ಕ್ರಿಯೇಟರ್ಸ್ ಹೆಚ್ಚಾಗಿ ಥಂಬ್‌ನೈಲ್‌ಗಳಲ್ಲಿ ವಿಷಯಗಳನ್ನು ತೋರಿಸಿರುತ್ತಾರೆ. ಆದರೆ ಎಷ್ಟೋ ಬಾರಿ ಥಂಬ್‌ನೈಲ್‌ನಲ್ಲಿರುವ ವಿಷಯಕ್ಕೂ, ಅಥವ ಕೊಟ್ಟಿರುವ ಶಿರ್ಷಿಕೆಗೂ ಒಳಗೆ ಇರುವ ಕಂಟೆಂಟ್ ಗೂ ಯಾವುದೇ ಸಂಬಂಧ ಇರೋದಿಲ್ಲ. ಈ ರೀತಿಯಾಗಿ ವೀಕ್ಷಕರಿಗೆ ಮೋಸ ನಡೆಯುತ್ತಿದ್ದ ಇದಕ್ಕೆ ಕಡಿವಾಣ ಹಾಕಲು ಯೂಟ್ಯೂಬ್ ಒಡೆತನ ಹೊಂದಿರುವ ಗೂಗಲ್ ಮುಂದಾಗಿದೆ.
ಕುತೂಹಲಕಾರಿ ಶೀರ್ಷಿಕೆ ನೀಡಿ, ಒಳಗೆ ಅದಕ್ಕೆ ಸಂಬಂಧಿಸಿದ ವಿಷಯವೇ ಇಲ್ಲದಿದ್ದರೆ ಜನರ ಸಮಯವೂ ವ್ಯರ್ಥ, ಜತೆಗೆ ಅವರನ್ನು ವಂಚಿಸಿದಂತಾಗುತ್ತದೆ ಎಂದಿರುವ ಗೂಗಲ್ ಭಾರತದಲ್ಲಿ ನಿಯಮಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ.
ನಿಯಮ ಪಾಲನೆ ಮಾಡದ ಕಂಟೆಂಟ್ ಗಳನ್ನು ಯಾವುದೇ ಸೂಚನೆ ಅಥವಾ ಸ್ಟ್ರೈಕ್ ತೋರಿಸದೆ ತೆಗೆದುಹಾಕಲಾಗುವುದು ಎಂದು ಹೇಳಿದೆ. ಆರಂಭದಲ್ಲಿ ಹಾದಿ ತಪ್ಪಿಸುವ ಹಾಗೂ ನಿಯಮಗಳನ್ನು ಪಾಲಿಸದ ಥಂಬ್‌ನೈಲ್‌ಗಳಿರುವ ವೀಡಿಯೋಗಳನ್ನು ಅಳಿಸಲಾಗುವುದು. ಸದ್ಯ ಹೊಸ ವೀಡಿಯೋ ಅಪ್‌ಲೋಡ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.