ಕೋಟೇಶ್ವರ: ಗಾಳಿ ತುಂಬುವಾಗ ಟಯರ್ ಸ್ಪೋಟ..!: ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಯುವಕ: ಗಂಭೀರ ಗಾಯ..!

ಕುಂದಾಪುರ: ಖಾಸಗಿ ಶಾಲಾ ಬಸ್ಸಿಗೆ ಗಾಳಿ ತುಂಬುವಾಗ ಟಯರ್ ಸ್ಪೋಟಗೊಂಡು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಕೆಪಿಎಸ್ ಪಿಯು ಕಾಲೇಜ್ ಬಳಿ ಸಂಭವಿಸಿದೆ.

ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಟಯರ್ ಪಂಚರ್ ಶಾಪ್ ನಲ್ಲಿ ಶಾಲಾ ಬಸ್ಸಿನ ಟೈಯರಿಗೆ ಗಾಳಿ ತುಂಬುವ ಸಂದರ್ಭ ಟಯರ್ ಸ್ಪೋಟಗೊಂಡಿದೆ. ಈ ವೇಳೆ ಟಯರ್ ಗೆ ಗಾಳಿ ತುಂಬಿಸುತ್ತಿದ್ದ ಅಬ್ದುಲ್ ರಜೀದ್ (19) ಎಂಬವರು ಗಾಳಿಯಲ್ಲಿ ಮೇಲೆ ಹಾರಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಯುವಕನ ಕೈ ಮುರಿತಕ್ಕೊಳಗಾಗಿದೆ.

ತಕ್ಷಣ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!