ಭಿಕ್ಷುಕರ ಕುಟುಂಬದ ಆತಿಥ್ಯಕ್ಕೆ ನಿಬ್ಬೆರಗಾದ ಜನ: ಕೋಟಿಗಟ್ಟಲೆ ಹಣ ಖರ್ಚು ಮಾಡಿ ಔತಣ ಕೂಟ: ಅಜ್ಜಿಯ ಸ್ಮರಣಾರ್ಥಕ್ಕೆ ಭರ್ಜರಿ ಆತಿಥ್ಯ


ಒಂದೊತ್ತಿನ ಊಟಕ್ಕೆ ಇಡೀ ದಿನ ಭಿಕ್ಷೆ ಬೇಡೋ ಭಿಕ್ಷಕರು, ಅಸಹಾಯಕ ಮುಖ, ಹರಕಲು ಬಟ್ಟೆ ಹಾಕಿಕೊಂಡು ಬದುಕು ಸಾಗಿಸುತ್ತಾರೆ. ಆದರೆ ಈ ಊರಲ್ಲಿ ಮಾತ್ರ ಭಿಕ್ಷುಕರ ಕುಟುಂಬವೊAದು ಜನರೇ ನಿಬ್ಬೆರಗಾಗುವ ಹಾಗೆ ಕೋಟಿ ಹಣ ಖರ್ಚು ಮಾಡಿ ಔತಣ ಕೂಟವನ್ನೇ ಏರ್ಪಡಿಸಿ ಸುದ್ದಿಯಾಗಿದೆ.

ಪಾಕಿಸ್ತಾನದ ಗುಜ್ರಾನ್‌ವಾಲಾದ ರಾಹ್ವಾಲಿ ರೈಲು ನಿಲ್ದಾಣದ ಬಳಿ ಭಿಕ್ಷುಕ ಕುಟುಂಬವೊAದು ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿ, 20 ಸಾವಿರ ಮಂದಿಗೆ ಔತಣಕೂಟ ಏರ್ಪಡಿಸಿರುವುದು. ಅದೂ ಮದುವೆಗಲ್ಲ ಬದಲಾಗಿ ಅವರ ಅಜ್ಜಿ ತೀರಿಕೊಂಡು 40 ದಿನಗಳು ಕಳೆದಿದ್ದು ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕುಟುಂಬವು ಕೇವಲ ಅತಿಥಿ ಮಾತ್ರವಲ್ಲ ಸುತ್ತಮುತ್ತಲಿನ ಎಲ್ಲಾ ಜನರನ್ನು ಔತಣಕೂಟಕ್ಕೆ ಕರೆದಿದ್ದರು. ಪಂಜಾಬ್‌ನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು. 250 ಕುರಿಗಳನ್ನು ಹತ್ಯೆ ಮಾಡಲಾಗಿತ್ತು, ವಿವಿಧ ಮಾಂಸ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿತ್ತು. ಈ ಔತಣಕೂಟವು ಶ್ರೀಮಂತರ ಹುಬ್ಬೇರುವಂತೆ ಮಾಡಿತ್ತು

ಭಿಕ್ಷುಕ ಕುಟುಂಬದ ಈ ಔತಣ ಕೂಟದ ದ ಬಗ್ಗೆ ಕೆಲವರು ವ್ಯಂಗ್ಯ ಮಾಡಿದರೆ ಇನ್ನೂ ಕೆಲವರು ಸಂತೋಷ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ, ಆಹಾರಕ್ಕಾಗಿ ಭಿಕ್ಷೆ ಬೇಡುವ ಕಲೆಯನ್ನು ಕಲಿತವರು ಎಂದಿಗೂ ಹಸಿವಿನಿಂದ ಇರಲು ಸಾಧ್ಯವಿಲ್ಲ ಎಂಬುದು ಸತ್ಯ ಎಂದು ಕೆಲವರು ಹೇಳಿದ್ದಾರೆ.

error: Content is protected !!