ಶಿಶಿಲ: ಕಾಡಾನೆ ದಾಳಿ: ವ್ಯಕ್ತಿಗೆ ಗಾಯ: ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಘಟನೆ

ಶಿಶಿಲ: ಮಕ್ಕಳನ್ನು ಶಾಲೆಗೆ ಕಳುಹಿಸಲು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ನ.21ರಂದು ಕಾಡಾನೆ ದಾಳಿ ನಡೆಸಿದ ಘಟನೆ ಶಿಶಿಲದಲ್ಲಿ ನಡೆದಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ ತನ್ನ ಮಕ್ಕಳನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಬಿಡಲು 8.30ರ ಸುಮಾರಿಗೆ ಹೋಗುತ್ತಿದ್ದಾಗ ಮಾರ್ಗ ತಿರುವಿನ ಮಧ್ಯೆ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಭಯದಿಂದ ತನ್ನ ಬೈಕ್ ಅನ್ನು ಸಡನ್ನಾಗಿ ಬ್ರೇಕ್ ಹಾಕಿ ನಿಲ್ಲಿಸಿದಾಗ ಬೈಕಿಂದ ಬಿದ್ದು ವಸಂತ ಗೌಡ ಮತ್ತು ಮಕ್ಕಳಾದ ಲಾವ್ಯ, ಹಾಗೂ ಅದ್ವಿತ್ ಗೆ ಮೊಣಕಾಲು ಮತ್ತು ಕೈಗಳಿಗೆ ಗಾಯಗಳಾಗಿದೆ. ಅವರು ಬೈಕ್ ಅನ್ನು ಬಿಟ್ಟು ಅಲ್ಲಿಂದ ಓಡಿ ತಪ್ಪಿಸಿಕೊಂಡು ಮನೆ ಸೇರಿದ್ದಾರೆ. ಆದರೆ ಓಡುತ್ತಿದ್ದಂತೆಯೇ ಬೈಕ್ ಕಡೆಗೆ ಬಂದ ಒಂಟಿ ಸಲಗ ಬೈಕ್ ಅನ್ನು ಸೊಂಡಿಲಿನಿಂದ ಕೆಡವಿ ಕಾಲಿನಿಂದ ತುಳಿದು ಸಂಪೂರ್ಣ ಹಾನಿಗೊಳಿಸಿರುವುದಾಗಿ ತಿಳಿದು ಬಂದಿದೆ.

ತಾಲೂಕಿನಲ್ಲಿ ಕಾಡಾನೆಯ ಉಪಟಳ ಮಿತಿ ಮೀರಿದ್ದು ಕೂಡಲೇ ಅರಣ್ಯ ಇಲಾಖೆಯವರು ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

error: Content is protected !!