ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ..!: ಅಕೌಟೆಂಟ್ ಪ್ರಿಯಾ ಸಜೀವ ದಹನ..!: ಹುಟ್ಟುಹಬ್ಬದ ಮುನ್ನ ದಿನವೇ ಕೊನೆಯುಸಿರೆಳೆದ ಯುವತಿ: ಕಣ್ಣೀರಿಟ್ಟ ತಂದೆ..!

ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಬೆಂಕಿ ತಗುಲಿ ಭಾರೀ ದೊಡ್ಡ ಅನಾಹುತ ಸಂಭವಿಸಿದ ಘಟನೆ ನ.19ರ ಸಂಜೆ ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ನಡೆದಿದೆ.

ನಿನ್ನೆ ಸಂಜೆ ಸುಮಾರು 5.30ರ ವೇಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಶೋ ರೂಂ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಗ್ರೀನ್ ಸಿಟಿ ಮೋಟಾರ್ಸ್ ಶೋ ರೂಂ ಸಂಪೂರ್ಣವಾಗಿ ಸುಟ್ಟು ಹೋಗಿದೆ

ಘಟನಾ ಸಂದರ್ಭದಲ್ಲಿ ಶೋ ರೂಂನಲ್ಲಿ ಒಟ್ಟು 6 ಜನ ಕೆಲಸ ಮಾಡುತ್ತಿದ್ದು, ಬೆಂಕಿ ಬಿದ್ದ ಕೂಡಲೇ ಮೃತ ಪ್ರಿಯಾ ಕ್ಯಾಶಿಯರ್ ರೂಂನ ಒಳಗೆ ಹೋಗಿ ಡೋರ್ ಲಾಕ್ ಮಾಡಿಕೊಂಡಿದ್ದಾರೆ. ನಂತರ ಹೆಚ್ಚಿನ ಹೊಗೆ ಹಾಗೂ ಬೆಂಕಿಯ ತೀವ್ರತೆಯಿಂದ ಯುವತಿ ಅದೇ ರೂಂನಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನೂ ಮೂರು ಜನರಿಗೆ ಸಣ್ಣಪುಟ್ಟ ಗಾಯದೊಂದಿಗೆ ಉಸಿರಾಟದ ಸಮಸ್ಯೆಯು ಉಂಟಾಗಿದೆ.

ಮೃತ ಪ್ರಿಯಾ ಅವರಿಗೆ ಇಂದು ಹುಟ್ಟು ಹುಬ್ಬದ ಸಂಭ್ರಮವಾಗಿತ್ತು. ಅವರ ತಂದೆ ಮಗಳ ಹುಟ್ಟುಹಬ್ಬಕ್ಕಾಗಿ ಹೊಸ ಬಟ್ಟೆ ಕೂಡ ಖರೀದಿಸಿದ್ದರು. ಆದರೆ ದುರಾದೃಷ್ಟವಶಾತ್ ಪ್ರಿಯಾ ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮಗಳ ಭೀಕರ ಸಾವನ್ನು ನೆನೆದು ಅವರ ತಂದೆ ಕಣ್ಣೀರಿಟ್ಟಿದ್ದಾರೆ.

ಅನಾಹುತದ ಬಳಿಕ ಶೋ ರೂಂ ಮಾಲೀಕ ಪುನೀತ್ ಎಂಬುವವರು ಓಡಿ ಹೋಗಿದ್ದಾರೆ ಎನ್ನಲಾಗಿದೆ. ದುರಂತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ತನಿಖೆಯಲ್ಲಿ ಮೀಟರ್ ಬೋರ್ಡ್ನಿಂದ ಶಾರ್ಟ್ ಆಗಿದೆ. ನಂತರ ಅದರ ಕಿಡಿ ಬ್ಯಾಟರಿಗಳಿಗೆ ತಗುಲಿ ವೇಗವಾಗಿ ಶೂ ರೂಂಗೆ ಬೆಂಕಿ ಆವರಿಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

error: Content is protected !!