ರಾತ್ರೋರಾತ್ರಿ ಶಿವ ಮತ್ತು ಗಣೇಶನ ಗುಡಿಗಳು ನೆಲಸಮ..!: ರಾಯಚೂರಿನಲ್ಲಿ ಮಧ್ಯರಾತ್ರಿ ಸದ್ದು ಮಾಡಿದ ಬುಲ್ಡೋಜರ್..!

ರಾಯಚೂರು : ರಾತ್ರೋರಾತ್ರಿ ಶಿವ ಮತ್ತು ಗಣೇಶನ ಗುಡಿಗಳನ್ನು ನೆಲಸಮ ಮಾಡಿರುವ ಘಟನೆ ನ.20ರಂದು ರಾಯಚೂರು ನಗರದಲ್ಲಿ ನಡೆದಿದೆ.

ಸಂತೋಷ ನಗರದ ಸಿಎ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ ಆರೋಪದಲ್ಲಿ 2 ದೇಗುಲಗಳನ್ನು ಧ್ವಂಸ ಮಾಡಲಾಗಿದೆ.

ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳು ಇಡಲು ಕಟ್ಟಲಾಗಿದ್ದ ಶೆಡ್ ಅನ್ನೇ ಗುಡಿ ಮಾಡಿಕೊಂಡು ಕೆಲ ಸ್ಥಳೀಯರು ಪೂಜೆ ಸಲ್ಲಿಸುತ್ತಿದ್ದರು. 2022ಜೂನ್ 1ರಂದು ಪ್ರೌಢಶಾಲೆ ಕಟ್ಟಡಕ್ಕೆ ಜಾಗ ಮಂಜೂರಾಗಿತ್ತು. ಜಾಗ ಮಂಜೂರು ಆದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು.

ಶಾಲೆ ಕಟ್ಟಡಕ್ಕೆ ಅನುದಾನ ಬಿಡುಗಡೆ ಆಗಿದ್ದರೂ ಸ್ಥಳೀಯರಿಂದ ಗುಡಿಗಳ ತೆರವಿಗೆ ವಿರೋಧ ವ್ಯಕ್ತವಾಗಿದೆ. ಸ್ಥಳೀಯರ ವಿರೋಧ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ತಡರಾತ್ರಿ ಗುಡಿಗಳ ತೆರವು ಕಾರ್ಯ ನಡೆದಿದೆ.

ನಗರಸಭೆ ಪೌರಾಯುಕ್ತ, ಹೆಚ್ಚುವರಿ ಎಸ್‌ಪಿ ಶಿವಕುಮಾರ್ ಮತ್ತು ಹರೀಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಗುಡಿಗಳನ್ನು ತೆರವು ಮಾಡಲಾಯಿತು.

error: Content is protected !!