ಗುರುವಾಯನಕೆರೆ ನವಶಕ್ತಿ ಮೈದಾನದಲ್ಲಿ “ಯಕ್ಷ ಸಂಭ್ರಮ ” ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪೂರ್ವಬಾವಿ ಸಭೆ: ವಿವಿಧ ಸಮಿತಿಗಳ ರಚನೆ,:

 

 

 

ಬೆಳ್ತಂಗಡಿ: ಪಟ್ಲ ಪೌಂಡೇಷನ್ ಬೆಳ್ತಂಗಡಿ ಘಟಕದ ವತಿಯಿಂದ ಗುರುವಾಯನಕೆರೆ ನವಶಕ್ತಿ ಮೈದಾನದಲ್ಲಿ ಡಿ 14 ರಂದು ನಡೆಯಲಿರುವ ಮೂರನೇ ವರ್ಷದ “ಯಕ್ಷ ಸಂಭ್ರಮ” ಅದ್ದೂರಿ ಕಾರ್ಯಕ್ರಮದ ಪೂರ್ವ ಬಾವಿ ಸಭೆಯು ನ10 ಭಾನುವಾರ  ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುವಾಯನಕೆರೆ ನವಶಕ್ತಿ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಡಿಸೆಂಬರ್ 14 ರಂದು ನಡೆಯಲಿರುವ “ಯಕ್ಷ ಸಂಭ್ರಮ” ಕಾರ್ಯಕ್ರಮಗಳನ್ನು ವಿಶೇಷ ರೀತಿಯಲ್ಲಿ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ನಂತರ ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಬೆಳ್ತಂಗಡಿ ಪಟ್ಲ ಪೌಂಡೇಷನ್ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಭುಜಬಲಿ ಧರ್ಮಸ್ಥಳ, ಪುಷ್ಪರಾಜ್ ಶೆಟ್ಟಿ, ಸುಕೇಶ್ ಜೈನ್ ಕಡಂಬು,ರಾಜೇಶ್ ಶೆಟ್ಟಿ , ಶಶಿರಾಜ್ ಶೆಟ್ಟಿ, ಗಂಗಾಧರ್ ಭಟ್ ಕೆವುಡೇಲು,ದಯಾನಂದ ಎಲಚ್ಚಿತ್ತಾಯ,ಕಿರಣ್ ಶೆಟ್ಟಿ, ಭುವನೇಶ್ ಗೇರುಕಟ್ಟೆ, ಪ್ರಸಾದ್ ಶೆಟ್ಟಿ ಎಣಿಂಜೆ, ಪ್ರಶಾಂತ್ ಕರಂಬಾರ್, ಪ್ರದೀಪ್ ಶೆಟ್ಟಿ ಶಕ್ತಿನಗರ,ಗಿರೀಶ್ ನಾಳ, ಉಮೇಶ್ ಕುಲಾಲ್,ಅರುಣ್ ಕುಮಾರ್, ಜಗದೀಶ್ ಕನ್ನಾಜೆ,ಮಂಜುನಾಥ್,ಯತೀಶ್,ಆದರ್ಶ್
ಸೇರಿದಂತೆ ಘಟಕದ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ: “ಯಕ್ಷ ಸಂಭ್ರಮ” 3 ನೇ ವರ್ಷದ ವಾರ್ಷಿಕೋತ್ಸವ ಪೂರ್ವಭಾವಿ ಸಭೆ: ಡಿ14, ಗುರುವಾಯನಕೆರೆಯಲ್ಲಿ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ :

error: Content is protected !!