
ಬೆಳ್ತಂಗಡಿ : ಸಾಮರಸ್ಯದ ಸಂಕ್ರಾಂತಿ” ಎಂಬ ಕಲ್ಪನೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬಹಳ ವಿಶಿಷ್ಟವಾಗಿ ಪರಿಶಿಷ್ಟ ಜಾತಿ ಬಂಧುಗಳ ಕಾಲೋನಿಯಲ್ಲಿ ಆಚರಿಸಿ ಮಾದರಿಯೆನಿಸಿಕೊಂಡಿದ್ದಾರೆ.
ತಾಲೂಕಿನಾದ್ಯಂತ ಪರಿಶಿಷ್ಟ ಜಾತಿ ಬಂಧುಗಳ ಕಾಲೋನಿಗೆ ಭೇಟಿ ನೀಡಿ ಅವರೊಂದಿಗೆ ವಿಶೇಷವಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಜ.14 ರಂದು ವೇಣೂರಿನಲ್ಲಿ ಪ್ರಾರಭಗೊಂಡ ಈ ಸಾಮರಸ್ಯದ ಸಂಕ್ರಾಂತಿಯು ಎರಡು ದಿನಗಳಲ್ಲಿ ಸುಮಾರು 2000 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಬಂಧುಗಳೊಂದಿಗೆ ಸಂಕ್ರಾಂತಿಯನ್ನು ಆಚರಿಸಿದರು. ಸಮಾಜದಲ್ಲಿರುವ ಜಾತಿ ತಾರತಮ್ಯ, ಅಸ್ಪಶ್ರ್ಯತೆ, ಮೇಲು-ಕೀಳು ಎಂಬ ಭಾವನೆಯನ್ನು ತೊಡೆದು ಹಾಕುವ ಉದ್ಧೇಶದಿಂದ ಸಾಮರಸ್ಯದ ಸಂಕ್ರಾಂತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಎಲ್ಲಾ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಸಾರ್ವಜನಿಕರು, ಪ.ಜಾತಿ ಬಂಧುಗಳು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.