
ಬೆಳ್ತಂಗಡಿ: ಕಳಿಯ ಗ್ರಾಮದ ಸಂಬೋಳ್ಯ ಎಂಬಲ್ಲಿ ಬೆಳಿಗ್ಗೆ ಧನು ಪೂಜೆಗೆ ಹೋದ 9 ನೇ ತರಗತಿ ವಿದ್ಯಾರ್ಥಿಯ ಮೃತದೇಹ ಸಮೀಪದ ಕೆರೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜ.14 ರಂದು ಬೆಳಗ್ಗೆ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಸುಮಂತ್ (16). ಮುಂಜಾನೆ ಐದು ಗಂಟೆ ಸುಮಾರಿಗೆ ನಾಳ ದೇವಸ್ಥಾನಕ್ಕೆ ಧನು ಪೂಜೆಗೆ ಮನೆಯಿಂದ ತೆರಳಿದ್ದು, ನಂತರ ನಾಪತ್ತೆಯಾಗಿದ್ದ, ಹುಡುಕಾಟ ನಡೆಸಿದಾಗ ಮನೆ ದಾರಿ ಮಧ್ಯೆ ಇರುವ ತೋಟದ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಅದಲ್ಲದೇ ಸಮೀಪದಲ್ಲಿ ರಕ್ತದ ಕಲೆ ಕಂಡು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದ್ದು, ಘಟನೆಯ ಸ್ಪಷ್ಟ ಚಿತ್ರಣ ಪಡೆಯಲು ತನಿಖೆ ಆರಂಭಿಸಿದ್ದಾರೆ.