ಗೇರುಕಟ್ಟೆ, ಸಂಶಯಾಸ್ಪದ ರೀತಿಯಲ್ಲಿ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ತೀವ್ರಗೊಂಡ ಪೊಲೀಸರ ಶೋಧ ಕಾರ್ಯ,:

 

 

 

ಬೆಳ್ತಂಗಡಿ : ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಮನೆಯಿಂದ ಜ‌.14 ರಂದು 5 ಗಂಟೆಗೆ ಹೊರಟು ಹೋದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಪುತ್ರ ಬಾಲಕ ಸುಮಂತ್(15) ಎಂಬಾತ ದೇವಸ್ಥಾನಕ್ಕೂ ತಲುಪದೆ ಮನೆಗೂ ವಾಪಾಸು ಹೋಗದೆ ನಾಪತ್ತೆಯಾಗಿ ಆತನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿವಿಧ ತಂಡದಿಂದ ತಡ ರಾತ್ರಿಯಿಂದಲೇ ತೀವ್ರ ಶೋಧ ಮತ್ತು ಕೂಬಿಂಗ್ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಸುಮಂತ್ ಮೃತದೇಹ ಸಿಕ್ಕ ಸುತ್ತಮುತ್ತಲಿನಲ್ಲಿ FSL ತಂಡ, SOCO ತಂಡ, ಪೊಲೀಸರ ತಂಡದಿಂದ ಜ.14 ರಂದು ರಾತ್ರಿ 8:30 ರಿಂದ 11:30 ರ ವರೆಗೆ ರಕ್ತದ ಕಲೆಗಳು ಬಿದ್ದ ಜಾಗಗಳಲ್ಲಿ ಕೆಮಿಕಲ್ ಮೂಲಕ ಗುರುತಿಸುವ ‘ಲೂಮಿನಿಯನ್ ಟೆಸ್ಟ್’ ಮೂಲಕ ಮಾಡಿದ್ದಾರೆ.

ಬಾಲಕ ಸುಮಂತ್ ಮೃತದೇಹ ಪತ್ತೆಯಾದ ಬೆನ್ನಲ್ಲೇ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಾಲಕನ ಸಾವು ಹಲವು ಸಂಶಯಗಳಿಗೆ ಕಾರಣವಾಗಿದೆ. ಮೃತದೇಹ ಪತ್ತೆಯಾದ ತೋಟದ ಕೆರೆಯ ಪ್ರದೇಶದ ಸುತ್ತಮುತ್ತ ಸಾಕ್ಷ್ಯಾಧಾರಕ್ಕಾಗಿ ಬೆಳಗ್ಗೆ 7 ಗಂಟೆಯಿಂದ ನಿರಂತರವಾಗಿ ಕೂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೊಲೀಸರ ಒಂದು ತಂಡ ಜ.15 ರಂದು ಬೆಳಗ್ಗೆ ಕೆರೆಯ ನೀರನ್ನು ಪಂಪ್ ಬಳಸಿ ಹಿಂಗಿಸುವ ಕಾರ್ಯ ನಡೆಯುತ್ತಿದ್ದು. ಈಗಾಗಲೇ ಬಾಲಕ ಸುಮಂತ್ ಮೃತದೇಹ ಮನೆಗೆ ತಲುಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ತಲೆಗೆ ಮೂರು ಬಲವಾದ ಗಾಯದ ಗುರುತು ಹಾಗೂ ಶ್ವಾಸಕೋಶದಲ್ಲಿ ನೀರಿದ ಅಂಸ ಕೂಡ ಶವಪರೀಕ್ಷೆ ವೇಳೆ ಪತ್ತೆ ಹಚ್ಚಿದ ಮಂಗಳೂರು ವೈದ್ಯರು.

ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದಲ್ಲಿ ವೇಣೂರು, ಬೆಳ್ತಂಗಡಿ,ಪುಂಜಾಲಕಟ್ಟೆ,ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!