ಮೊಟ್ಟೆ ತಿನ್ನೋ ಕೋಣನಿಗೆ ಭಾರೀ ಬೇಡಿಕೆ: 23 ಕೋಟಿ ರೂ. ಬೆಲೆ :ವೀರ್ಯಕ್ಕಂತೂ ಇನ್ನಿಲ್ಲದ ಬೇಡಿಕೆ!: ಪುಷ್ಕರ್ ಅಂತಾರಾಷ್ಟ್ರೀಯ ಜಾನುವಾರು ಮೇಳದಲ್ಲಿ ಭಾರೀ ಗಮನ ಸೆಳೆದ ‘ಅನ್ಮೋಲ್’

ರಾಜಸ್ಥಾನ: ಪುಷ್ಕರ್ ಅಂತಾರಾಷ್ಟ್ರೀಯ ಜಾನುವಾರು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ 8 ವರ್ಷದ ಕೋಣ ಭಾರೀ ಗಮನ ಸೆಳೆದಿದೆ.

ಹರಿಯಾಣದ ಸಿರ್ಸಾ ಜಿಲ್ಲೆಯ ಹಿಸ್ಸು ಗ್ರಾಮದ ನಿವಾಸಿ ಪಾಲ್ಮಿಂದ್ರ ಗಿಲ್ ಅವರು ಸಾಕಿರುವ ಈ ಕೋಣವು ಬರೋಬ್ಬರಿ 1500 ಕೆಜಿ ತೂಕವಿದೆ. ಈ ಕೊಬ್ಬಿದ ಕೋಣದ ಹೆಸರು ಅನ್ಮೋಲ್. ತನ್ನ ದೈತ್ಯಾಕಾರದಿಂದಲೇ ಸುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿಯಾಗಿ, ಮಾಂಸಖಂಡಗಳಿಂದ ತುಂಬಿಕೊಂಡಿದೆ. ಪುಷ್ಕರ್ ಅಂತಾರಾಷ್ಟ್ರೀಯ ಜಾನುವಾರು ಮೇಳದಲ್ಲಿ ಇದನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ.

ಮೇಳದಲ್ಲಿ ಇದನ್ನು ಖರೀದಿಸಲು ಜನರು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಇಳಿದಿದ್ದಾರೆ. ಕೋಣನಿಗೆ 23 ಕೋಟಿ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಇದರ ಮಾಲೀಕರು ಮಾತ್ರ ಮಾರಾಟಕ್ಕೆ ಒಪ್ಪುತ್ತಿಲ್ಲ.

ಕೋಣದ ವಿಶೇಷತೆ: ಈ ದೈತ್ಯ ಕೋಣವನ್ನು ಸಾಕುವುದು ಅಷ್ಟೇ ದುಬಾರಿ ಎಂದು ಮಾಲೀಕರು ತಿಳಿಸಿದ್ದಾರೆ. ಅಂದ ಹಾಗೆ ಈ ಕೋಣ ತಿನ್ನೋದು ಹಣ್ಣು, ಜೋಳ, ಸೋಯಾಬೀನ್, ದೇಸಿ ತುಪ್ಪ, ಹಾಲು, ಎಣ್ಣೆ ಕೇಕ್ ಹಸಿರು ಮೇವು ಜೊತೆಗೆ ವಿಶೇಷವಾಗಿ ಮೊಟ್ಟೆ. ಇದರ ಆಹಾರಕ್ಕಾಗಿ ದಿನಕ್ಕೆ 1 ಸಾವಿರದಿಂದ 1,500 ರೂಪಾಯಿ ಖರ್ಚಾಗುತ್ತದೆ. ಕೋಣನ ಖರ್ಚು ಭರಿಸಲಾಗದೆ ಈ ಕೋಣದ ತಾಯಿ, ಇನ್ನೊಂದು ಎಮ್ಮೆಯನ್ನು ಮಾರಾಟ ಮಾಡಲಾಗಿದ್ದು, ಈ ಕೋಣದ ತಾಯಿ 25 ಲೀಟರ್ ಹಾಲು ನೀಡುತ್ತಿತ್ತು. ಅದರ ಕರುಗಳು 21 ಲೀಟರ್‌ಗಿಂತ ಕಡಿಮೆ ಹಾಲು ಕರೆಯುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ಅನ್ಮೋಲ್ ಕೋಣದ ವೀರ್ಯಕ್ಕಿದೆ ಭಾರೀ ಬೇಡಿಕೆ: ಅನ್ಮೋಲ್ ಕೋಣದ ವೀರ್ಯಕ್ಕೆ ಭಾರೀ ಬೇಡಿಕೆ ಇದೆ. ರೈತರು ತಮ್ಮ ಎಮ್ಮೆಗಳಿಗೆ ಇದೇ ದೈತ್ಯ ಕೋಣದ ವೀರ್ಯವನ್ನು ಇಂಜೆಕ್ಟ್ ಮಾಡಲು ರೈತರು ಬಯಸುತ್ತಾರೆ. ಅದಕ್ಕಾಗಿಯೇ ವಾರಕ್ಕೆ ಎರಡು ಬಾರಿ ಇದರ ವೀರ್ಯ ಸಂಗ್ರಹ ಮಾಡಲಾಗುವುದು. ಒಮ್ಮೆ ತೆಗೆದ ವೀರ್ಯದಿಂದ 300 ಕ್ಕೂ ಅಧಿಕ ಎಮ್ಮೆಗಳಿಗೆ ಉಪಯೋಗಿಸಬಹುದು. ಒಂದು ಎಮ್ಮೆಗೆ 250 ರೂಪಾಯಿಯಂತೆ ನೀಡಿ ರೈತರು ವೀರ್ಯ ಪಡೆಯುತ್ತಾರೆ ಎಂದು ಕೋಣದ ಮಾಲೀಕರು ಮಾಹಿತಿ ನೀಡಿದರು.

error: Content is protected !!