ಗೇರುಕಟ್ಟೆ: ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು, ಯಕ್ಷಾರಾಧನಾ ಕಲಾ ಪ್ರತಿಷ್ಠಾನ ನಾಳ, ಗೇರುಕಟ್ಟೆ ಇವರ ಸಹಯೋಗದೊಂದಿಗೆ ನ.09ರ ಶನಿವಾರದಂದು ಶ್ರೀ ಗಣೇಶೋತ್ಸವ ಸಭಾ ಭವನ ಗೇರುಕಟ್ಟೆಯಲ್ಲಿ “ಯಕ್ಷೋತ್ಸವ” ಕಾರ್ಯಕ್ರಮದ ನಡೆಯಲಿದೆ
ಬೆಳಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರ ನಾಳ ಇಲ್ಲಿನ ಪ್ರಧಾನ ಅರ್ಚಕರಾದ ಮೇದಮೂರ್ತಿ ರಾಘವೇಂದ್ರ ಅಸ್ರಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಎಂ, ಗೇರುಕಟ್ಟೆ ಜ್ಯೋತಿ ಕ್ಲೀನಿಕ್ ಡಾ. ಅನಂತ್ ಭಟ್, ನಿವೃತ್ತ ರೈಲ್ವೇ ಅಧಿಕಾರಿ ಕೃಷ್ಣ ಕೆ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪೂರ್ವಾಹ್ನ 11:30ರಿಂದ ಗಣೇಶ್ ಪುಂಜಾಲಕಟ್ಟೆ ಮತ್ತು ತಂಡದವರಿಂದ “ಯಕ್ಷಭಜನೆ” ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯಿಂದ “ಯಕ್ಷಗಾನ ಅಂದು-ಇಂದು, ನಾಳೆ” ಎಂಬ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ದಿವಾಕರ ಆಚಾರ್ಯ ಕೊರಂಜ ಹಾಗೂ ರಾಘವೆ ಮೆದಿನ ಭಾಗವಹಿಸಲಿದ್ದಾರೆ.
ಅಪರಾಹ್ನ 2 ಗಂಟೆಯಿಂದ ಕಾವ್ಯಶ್ರೀ ಅಜೆಕಾರು ಭಾಗವತಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ, ಸಂಜೆ 5:30ರಿಂದ “ತರಣಿ ಸೇನ ಕಾಳಗ” ಮಕ್ಕಳ ಯಕ್ಷಗಾನ ಮೂಡಿಬರಲಿದೆ.
ಸಂಜೆ 6:30ರಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಹರಿನಾರಾಯಣ ದಾಸ ಅಸ್ರಣ್ಣ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ದ.ಕ ಇದರ ಅಧ್ಯಕ್ಷರಾದ ತಾರನಾಥ ಗಟ್ಟಿ ಕಾಪಿಕಾಡು, ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣ, ನಿವೃತ್ತ ಮತ್ಸದ್ದಿ ಭುಜಬಲಿ, ಕಳಿಯ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷ ವಸಂತ ಮಜಲು, ಆರ್, ಎ.ಪಿ.ಸಿ.ಸಿ ಸಹಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ವಿಭಾಗ ಮುಖ್ಯಸ್ಥರಾದ ಸದಾಶಿವರಾವ್, ಯುವ ಉದ್ಯಮಿ ಕಿರಣ್ ಚಂದ್ರ ‘ಡಿ’ ಪುಷ್ಪಗಿರಿ, ಸುರೇಂದ್ರ ಕುಮಾರ್ ಜೈನ್ ಕಳಿಯ ಬೀಡು, ವಿನಯ್ ಪೆರಾಜೆ ಗೇರುಕಟ್ಟೆ ಉಪಸ್ಥಿತಲಿರಲಿದ್ದಾರೆ.
ರಾತ್ರಿ 9:30ರ ಸಹಭೋಜನದ ಬಳಿಕ, ಮೇದಿನಿ ನಿರ್ಮಾಣ ಮತ್ತು ಮಹಿಷಮರ್ಧಿನಿ- ಶಾಂಭವಿ ವಿಜಯ ತೆಂಕುತಿಟ್ಟು ಅಗ್ರಮಾನ್ಯ ವೃತ್ತಿಪರ ಮೇಳಗಳ ಕಲಾವಿದರ ಕೂಡುವಿಕೆಯೊಂದಿಗೆ “ಸಂಪೂರ್ಣ ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ.