ಸಿದ್ಧರಾಮಯ್ಯ ಭಂಡ ಮುಖ್ಯಮಂತ್ರಿ ಶಾಸಕ ಪೂಂಜ ಗಂಭೀರ ಆರೋಪ: ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ:

 

 

 

ಬೆಳ್ತಂಗಡಿ: ಸಿದ್ಧರಾಮಯ್ಯ ಸರಕಾರ ಮುಸಲ್ಮಾನರಿಗೆ ಮಾತ್ರ ಇರುವುದು ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ. ವಕ್ಫ್ ಬೋರ್ಡ್ ಗಾಗಿ 1974 ರಲ್ಲಿ ಮಾಡಿದ ಗಜೆಟೆಡ್ ನೋಟಿಫಿಕೇಶನ್ ಅನ್ನು ಸರಕಾರ ಹಿಂಪಡೆಯಬೇಕು ಎಂದು ಶಾಸಕ ಹರೀಶ ಪೂಂಜ ಆಗ್ರಹಿಸಿದರು.
ಅವರು ಬೆಳ್ತಂಗಡಿ ಆಡಳಿತ ಸೌಧದ ಎದುರು ಭಾರತೀಯ ಜನತಾ ಪಾರ್ಟಿಯ ವತಿಯಿಂದ ರೈತರ, ದಲಿತರ, ಮಠ, ದೇವಸ್ಥಾನಗಳ ಆಸ್ತಿ ಕಬಳಿಕೆ ಮಾಡುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರದ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ರಾಜ್ಯದ ಇತಿಹಾಸದಲ್ಲಿ ಭಂಡ ಮುಖ್ಯಮಂತ್ರಿ ಇದ್ದರೆ ಅದು ಸಿದ್ಧರಾಮಯ್ಯ ಮಾತ್ರ. ಇದು ಹಿಂದು ಪರ ಸರಕಾರ ಅಲ್ಲ. ಮುಸಲ್ಮಾನರ ಪರ ಇರುವ ಸರಕಾರ ಇದಾಗಿದೆ. ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ, ವಾಲ್ಮೀಕಿ, ಮೂಡಾದಂತಹ ಭ್ರಷ್ಟಾಚಾರದ ಹಗರಣಗಳು ಸಾಲುಸಾಲಾಗಿ ನಡೆದಿವೆ. ಈಗ ಅಲ್ಪಸಂಖ್ಯಾತರನ್ನು ಓಲೈಸುವ ಮೂಲಕ ಹಿಂದೂ ಸಮಾಜಕ್ಕೆ ದ್ರೋಹ, ಅಪಮಾನ ಮಾಡುವ ಕೆಲಸವನ್ನು ಸರಕಾರ ಮಾಡುತ್ತಿದೆ.
ಗ್ಯಾರಂಟಿಗಳ ಆಧಾರದಲ್ಲಿ ಅಧಿಕಾರ ಹಿಡಿದ ಕಾಂಗ್ರೇಸ್ ರಾಜ್ಯದ ಅಭಿವೃದ್ಧಿಗೆ ಗಮನಕೊಡದೆ ಅರಾಜಕತೆ ಸೃಷ್ಟಿಸುತ್ತಿದೆ. ಮೂಡಾ ಹಗರಣದಲ್ಲಿ ಸಿದ್ಧರಾಮಯ್ಯ ಮೇಲೆ ಮೊಕದ್ದಮೆ ಇದ್ದರೂ ಏನೂ ಆಗದಂತೆ ಭಂಡರಂತೆ
ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತಿದ್ದಾರೆ. ಇವರ ಭ್ರಷ್ಟತೆಯಿಂದಾಗಿ ರಸ್ತೆ,ಅಂಗನವಾಡಿ, ಶಾಲೆ ರಿಪೇರಿಗೆ ಅನುದಾನ ಇಲ್ಲ. ಆದರೆ ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಹಣ ನೀಡಲು ಹೊರಟಿದ್ದಾರೆ ಎಂದರು.
ಅಲ್ಪಸಂಖ್ಯಾತರ ಓಲೈಕೆಗೆ ಯಾವುದೇ ನೋಟಿಸು ಕೊಡದೆ, ಯಾವುದೇ ಕಾನೂನಿನ ಪ್ರಕ್ರಿಯೆ ಮಾಡದೆ ಸಾವಿರಾರು ಎಕರೆ ಜಮೀನನ್ನು ವಕ್ಫ್ ಹೆಸರಿಗೆ ಮಾಡಿದೆ. ಬಿಜೆಪಿ ಇದನ್ನು ಖಂಡಿಸುತ್ತದೆ. ವಿಜಯಪುರ, ರಾಯಚೂರು, ಕೋಲಾರ, ಕೊಪ್ಪಳ, ಚಿತ್ರದುರ್ಗ, ತುಮಕೂರಿನಿಂದ ಹಿಡಿದು ಮಂಗಳೂರುವರೆಗೆ ಹಿಂದುಗಳ ರೈತರ ಜಮೀನನ್ನು ವಕ್ಫ ಆಸ್ತಿಯನ್ನಾಗಿ ಮಡಲಾಗಿದೆ. ಸಿಂದಗಿಯಲ್ಲಿ ಬಸವಣ್ಣರ ವಿರಕ್ತ ಮಠದ ಆಸ್ತಿ ವಕ್ಫ ಆಸ್ತಿಯಾಗಿದೆ. ಚಾಲುಕ್ಯರ ಸೋಮನಾಥೇಶ್ವರ ದೇವಸ್ಥಾನದ ಆರ್.ಟಿ.ಸಿ.ಯಲ್ಲಿ ವಕ್ಫ್ ಎಂದು ನಮೂದಾಗಿದೆ. ಎಂ.ಬಿ.ಪಾಟೀಲರ ವಿಧಾನಸಭಾ ಕ್ಷೇತ್ರದಲ್ಲಿನ 1500 ಎಕ್ರೆ ವಕ್ಫ್ ಆಸ್ತಿಯಾಗಿದೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇಂದು ಉತ್ತರ ಕರ್ನಾಟಕದ ತಾಲೂಕು ಕಚೇರಿಯಲ್ಲಿ ಆರ್.ಟಿ.ಸಿ.ಗೆ ಜನವೋ ಜನ .ದಿನ ನಿತ್ಯ ಭಯದಲ್ಲಿ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಜೆಟೆಡ್ ನೋಟಿಫಿಕೇಶನ್ ಗಳ ವಿವರಗಳನ್ನು ಈಚೆಗೆ ದಿನಪತ್ರಿಕೆಗಳು ಪ್ರಕಟಿಸಿದೆ.
ದ.ಕ. ದಲ್ಲೂ ಸುಮಾರು 600 ಎಕರೆ ವಕ್ಫ್ ಆಸ್ತಿ ಇದೆ. ಬೆಳ್ತಂಗಡಿ ತಾಲೂಕಿನಲ್ಲೂ ಕೆಲವು ಎಕರೆ ಇದೆ. ಹೀಗಾಗಿ ಎಲ್ಲಾ ಹಿಂದುಗಳುಇದರ ಬಗ್ಗೆ ಜಾಗೃತೆ ವಹಿಸಬೇಕಾಗಿದೆ. ಗ್ಯಾರಂಟಿಯ ಮೋಹದಲ್ಲಿ ನಾವಿರುವಾಗ ನಮ್ಮ ಆಸ್ತಿ ಬಗ್ಗೆ ಎಚ್ಚರಿಸಿದರು.
ಬಳಿಕ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮಂಡಲಾಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪಾರೆಂಕಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಇದ್ದರು.

error: Content is protected !!