ಸಾಂದರ್ಭಿಕ ಚಿತ್ರ
ಚಾರ್ಜ್ ಇಟ್ಟಿದ್ದ ಐಫೋನ್ ಸ್ಫೋಟಗೊಂಡು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಚೀನಾದ ಶಾಂಕ್ಸಿಯಲ್ಲಿ ಸಂಭವಿಸಿದೆ,
ವರದಿಗಳ ಪ್ರಕಾರ, ರಾತ್ರಿ ಮಲಗುವ ಮುನ್ನ ಮಹಿಳೆ ತನ್ನ ಐಫೋನ್ ಚಾರ್ಜ್ಗಿಟ್ಟಿದ್ದರು. ರಾತ್ರಿ ಮಲಗಿದ್ದಾಗ ಆಕಸ್ಮಿಕವಾಗಿ ಐಫೋನ್ 14 ಪ್ರೊ ಮ್ಯಾಕ್ಸ್ ಮೇಲೆ ಕೈ ಹಾಕಿದ್ದಾರೆ. ಆಗ ಐಫೋನ್ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಈ ಘಟನೆಯಿಂದ ಅಪಾರ್ಟ್ಮೆಂಟ್‌ನ ಗೋಡೆಗಳು ಹೊಗೆಯಿಂದ ಸಂಪೂರ್ಣ ಕಪ್ಪಾಗಿದ್ದು, ಹಾಸಿಗೆ ಕೂಡ ಸುಟ್ಟು ಕರಕಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಬ್ಯಾಟರಿಯಲ್ಲಿನ ದೋಷದಿಂದ ಇಂತಹ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಐಫೋನ್ 14 ಪ್ರೊ ಮ್ಯಾಕ್ಸ್ ಅನ್ನು 2022ರಲ್ಲಿ ಖರೀದಿಸಲಾಗಿದೆ ಮತ್ತು ಅದರ ವಾರಂಟಿ ಅವಧಿ ಮುಗಿದಿದೆ ಎಂದು ತಿಳಿದು ಬಂದಿದೆ. ಮಹಿಳೆ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಹಾನಿಯಾದ ಕಾರಣ ಮಾಲೀಕರು ಅದರ ಹಾನಿಯನ್ನು ನೀಡುವಂತೆ ಕೇಳಿದ್ದಾರೆ.
ಈ ಘಟನೆ ಬಗ್ಗೆ ಆ್ಯಪಲ್ ಕಂಪನಿ ಪ್ರತಿಕ್ರಿಯೆ ನೀಡಿದ್ದು, ಮೊಬೈಲ್‌ನಲ್ಲಿರುವ ಬ್ಯಾಟರಿ ಒರಿಜಿನಲ್ ಆಗಿದೆಯೇ ಅಥವಾ ರಿಪೇರಿ ಮಾಡುವಾಗ ಬದಲಾಯಿಸಲಾಗಿದೆಯೇ ಎಂಬುದು ತಿಳಿದಿಲ್ಲ. ಕಂಪನಿ ತನ್ನ ಉತ್ಪನ್ನಗಳಿಗೆ ಸಂಬAಧಿಸಿದ ಯಾವುದೇ ಸಂಭಾವ್ಯ ಭದ್ರತಾ ಸಮಸ್ಯೆಗಳನ್ನು ತನಿಖೆಗೊಳಪಡಿಸಲು ತನ್ನ ಬದ್ಧತೆಯನ್ನು ಒತ್ತಿಹೇಳಿದೆ.
ಸ್ಮಾರ್ಟ್ ಫೋನ್ ಬಳಕೆದಾರರು ಹೆಚ್ಚು ಹೊತ್ತು ಚಾರ್ಜ್ ಮಾಡಬಾರದು. ಚಾರ್ಜ್ ಮಾಡುವಾಗ ಸ್ಮಾರ್ಟ್ ಫೋನ್ ಸ್ಫೋಟಗೊಳ್ಳುವ ಘಟನೆ ನಡೆಯುತ್ತಿದ್ದು, ಕಂಪನಿ ಒದಗಿಸಿದ ಅಧಿಕೃತ ಚಾರ್ಜರ್ ಮತ್ತು ಬ್ಯಾಟರಿ ಘಟಕವನ್ನು ಮಾತ್ರ ಬಳಸಬೇಕು ಎಂದು ತಿಳಿಸಲಾಗಿದೆ. ಬದಲಿ ಬ್ಯಾಟರಿ ಅಥವ ಚಾರ್ಜರ್ ಬಳಸಿದ್ದಲ್ಲಿ ಮೊಬೈಲ್ ಸ್ಟೋಟಗೊಳ್ಳುವ ಸಂಭವವಿದೆ.