ಮುಂಬೈ: ನಟ ಸಲ್ಮಾನ್ ಖಾನ್ಗೆ ಒಂದರ ಮೇಲೊಂದಂತೆ ಬೆದರಿಕೆಗಳು ಬರುತ್ತಲೇ ಇವೆ. ಇದೀಗ ಮತ್ತೆ ಬಿಷ್ಣೋಯಿ ಸಹೋದರನ ಹೆಸರಲ್ಲಿ 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಡಲಾಗಿದೆ.
“ಸಲ್ಮಾನ್ ಖಾನ್ ಜೀವಂತವಾಗಿರಬೇಕು ಎಂದರೆ, ಆತ ನಮ್ಮ ಬಿಷ್ಣೋಯಿ ಸಮುದಾಯದ ದೇಗುಲಕ್ಕೆ ತೆರಳಿ ಕ್ಷಮೆ ಕೋರಬೇಕು ಅಥವಾ 5 ಕೋಟಿ ರೂಪಾಯಿ ನೀಡಬೇಕು. ಈ ಎರಡನ್ನೂ ಮಾಡಲು ಮುಂದಾಗದಿದ್ದರೆ, ಕೊಲೆ ಮಾಡುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ” ಎಂದು ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಈ ಸಂದೇಶ ಬಂದಿದೆಯೇ ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೆದರಿಕೆ ಕರೆ ಬಳಿಕ ಸಲ್ಮಾನ್ ಖಾನ್ಗೆ ಮತ್ತಷ್ಟು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.