ಬಿಟ್ಟಿ ಯೋಜನೆಗಳಿಂದ ಭೂಮಿ ಕಳೆದುಕೊಳ್ಳುವ ಆತಂಕ: ಅಲ್ಲಾನ ಹೆಸರಲ್ಲಿ ವಶಪಡಿಸಿದ ಭೂಮಿ ಮರಳಿ ಪಡೆಯುತ್ತೇವೆ:ಕೆರೆಹಳ್ಳಿ ಎಚ್ಚರಿಕೆ ಬೆಳ್ತಂಗಡಿ ಬಿಜೆಪಿ ಯುವ‌ಮೋರ್ಚಾ 5 ನೇ ವರ್ಷದ ದೋಸೆ ಹಬ್ಬ:

 

 

ಬೆಳ್ತಂಗಡಿ: ಸರಕಾರದ ಬಿಟ್ಟಿ ಯೋಜನೆಗಳಿಗೆ ಮರುಳಾಗಿ ಈಗ ಜಮೀನುಗಳನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಬರುತ್ತಿದೆ. ಹೀಗಾಗಿ ನಾವೆಲ್ಲರೂ ಜಾಗೃತಿ ಮೂಡಿಸಿಕೊಂಡು, ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ದೀಪಾವಳಿ ಪ್ರಯುಕ್ತ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಅಕ್ಟೋಬರ್ 31 ರ ಗುರುವಾರ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆದ ದೋಸೆ ಹಬ್ಬದಲ್ಲಿ ಅವರು ಮಾತನಾಡಿದರು.

 

 

 

 

 

ತುಳುನಾಡಿನಲ್ಲಿ ಪ್ರತಿ ಮನೆಯಲ್ಲಿ ಗೋರಕ್ಷಕರು ಇರುವುದು ಸಂತಸದ ಸಂಗತಿ. ಇಲ್ಲಿನ ಪರಂಪರೆಯನ್ನು ಯುವ ಮೋರ್ಚಾ ಮುಂದುವರಿಸುತ್ತಿರುವುದು ಮಹತ್ತರವಾದ ವಿಚಾರವಾಗಿದೆ.  ಬಯಲುಸೀಮೆಯಲ್ಲಿ ಶಕ್ತಿಯುತ ಹಿಂದುತ್ವದ ನಾಯಕರು, ಗಟ್ಟಿ ಕಾರ್ಯಕರ್ತರು ಇಲ್ಲದಿರುವುದು ವಿಷಾದದ ಸಂಗತಿ ಎಂದರು.
ಕಾಂಗ್ರೇಸ್ ಸರಕಾರ ತನ್ನ ಮೇಲೆ ಗೂಂಡಾ ಕಾಯ್ದೆ ಹಾಕಿದಾಗ ನನಗೆ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬಿದವರು ಶಾಸಕ ಪೂಂಜ ಅವರು. ನಾನು ಒಬ್ಬಂಟಿಯಲ್ಲ. ಕುಟುಂಬವನ್ನು ತೊರೆದು ಬಂದ ತನಗೆ ತುಳುನಾಡಿನ ಕಾರ್ಯಕರ್ತರು ಭರವಸೆಯಾಗಿದ್ದಾರೆ. ಪಕ್ಷದ ಕಾರ್ಯಕ್ರಮವನ್ನೇ ಹಿಂದುತ್ವದ ಕಾರ್ಯವೆಂಬಂತೆ ಮಾಡುತ್ತಿರುವ ಪೂಂಜ ಅವರು ಮುಂಬರುವ ದಿನಗಳಲ್ಲಿ ಮಂತ್ರಿಯಾಗಿ ದೋಸೆ ಹಬ್ಬ ನಡೆಸಬೇಕು ಎಂದು ಆಶಿಸಿದರು.

 

 

ಉಳುವವನೇ ಭೂಮಿಯ ಒಡೆಯ ಎಂದು ದೇವರಾಜ ಅರಸರು ಕಾನೂನನ್ನು ತಂದರೆ, ಸಿದ್ಧರಾಮಯ್ಯ ಅವರು ಅದೇ ಭೂಮಿಗಳನ್ನು ಹಿಂಪಡೆಯುವ ಕೆಲಸ ಮಾಡಿ ಕಾನೂನಿಗೆ ಅಗೌರವ ತೋರಿಸುತ್ತಿದ್ದಾರೆ. ಅಲ್ಲಾನ ಹೆಸರಿನಲ್ಲಿ ವಶಪಡಿಸಿಕೊಂಡ ಭೂಮಿಗಳನ್ನು ಮತ್ತೇ ಮರಳಿ ಪಡೆದೇ ಪಡೆಯಲಿದ್ದೇವೆ. ಎದೆಯುಬ್ಬಿಸಿ ಹೋರಾಟ ಮಾಡಲಿದ್ದೇವೆ ಎಂದು ಸಚಿವ ಜಮೀರ್ ಅಹ್ಮದ್ ಗೆ ಎಚ್ಚರಿಕೆ ನೀಡಿದರು.

 

 

 

ಶಾಸಕ ಹರೀಶ್ ಪೂಂಜ ಅವರು ಪ್ರಸ್ತಾವಿಸಿ, ಹಿಂದುತ್ವದ ರಾಜಕಾರಣ ಮಾಡದಿದ್ದರೆ ಮುದೊಂದು ದಿನ ನಾವೆಲ್ಲ ಸುನ್ನತ್ ಮಾಡಿಸಿಕೊಳ್ಳುವ ಕಾಲ ಬರಬಹುದು ಎಂದು ಎಚ್ಚರಿಸಿದರು. ಹಿಂದುತ್ವ ಇದ್ದರೆ ಮಾತ್ರ ಭಾರತ ಭಾರತವಾಗಿಯೇ ಇರಲು ಸಾಧ್ಯ ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್, ಬಿರ್ವೆರ್ ಕುಡ್ಲದ ಉದಯ ಪೂಜಾರಿ , ವಕೀಲೆ ಸಹನಾ ಕುಂದರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕ ವಸಂತ, ಸೀತಾರಾಮ ಬೆಳಾಲು, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಇದ್ದರು.
ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸ್ವಾಗತಿಸಿದರು. ನೃತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮೊದಲು ಗೋಪೂಜೆ, ಕುಣಿತ ಭಜನೆ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೂ ಸಹಸ್ರಾರು ಮಂದಿ ದೋಸೆಯ ಸವಿಯನ್ನುಂಡರು.ಶಾಸಕ ಹರೀಶ್ ಪೂಂಜ ಹಾಗೂ  ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಶಿಸ್ತು ಬದ್ಧ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

error: Content is protected !!