ಬೆಳ್ತಂಗಡಿ: ದೀಪಾವಳಿ ಹಬ್ಬಕ್ಕೆ ಮಳೆಯ ಸಿಂಚನವಾಗದು ಎಂದು ಭಾವಿಸಿದ್ದ ಬೆಳ್ತಂಗಡಿ ಜನತೆಗೆ ನಿರಾಸೆಯಾಗಿದೆ. ಇಂದು ಸಂಜೆ ಸುಮಾರು 4:40ಕ್ಕೆ ದಿಢೀರ್ ಮಳೆ ಸುರಿದಿದ್ದು ಹಬ್ಬದ ಸಂಭ್ರಮಕ್ಕೆ ತೊಂದರೆಯಾದಂತಾಗಿದೆ.
ಒಂದೆರಡು ದಿನ ಸಂಪೂರ್ಣವಾಗಿ ಬಿಡುವು ಪಡೆದಿದ್ದ ಮಳೆ ದೀಪಾವಳಿ ಮುಗಿಯುವ ತನಕ ಬಾರದೇ ಇದ್ದರೆ ಸಾಕು ಎಂದು ಎಷ್ಟೋ ಜನ ಪ್ರಾರ್ಥಿಸಿದ್ದು ಇದೆ. ಆದರೆ ಪ್ರಕೃತಿ ನಿಯಮಾನುಸಾರ ಇಂದು ಮಳೆಯಾಗಿ ದೀಪಾವಳಿಯ ಸಿದ್ಧತೆಗೆ ತೊಂದರೆಯಾಗಿದೆ.
ಹೂ, ಪಟಾಕಿ ಬಟ್ಟೆ, ತಿಂಡಿತಿನಿಸು ಹಾಗೂ ಇನ್ನಿತರ ಗೃಹಪಯೋಗಿ ವಸ್ತುಗಳನ್ನು ಖರೀದಿಸಲು ಪೇಟೆಗೆ ಬಂದವರು ಮಳೆಯ ಮಧ್ಯೆ ಪೇಚೆಗೆ ಸಿಕ್ಕಂತಾಗಿದೆ.