ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಸಂದೇಶ ಬಂದಿದ್ದು 2 ಕೋಟಿ ರೂ. ಗೆ ಬೇಡಿಕೆ ಇಡಲಾಗಿದೆ.
ಇತ್ತೀಚೆಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಸೋದರನೆಂದು ಹೇಳಿಕೊಂಡು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಕರೆ ಮಾಡಿ, ₹10 ಕೋಟಿ ಹಣ ಕೇಳಿದ್ದ. ಈ ಪ್ರಕರಣಕ್ಕೆ ಸಂಬAಧಿಸಿ ಅಪರಿಚಿತ ವ್ಯಕ್ತಿಯನ್ನು ನೋಯ್ಡಾ ಮತ್ತು ಮುಂಬೈ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ನಿನ್ನೆ ಬಂಧಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸ್ಆ್ಯಪ್ ಹೆಲ್ಪ್ಲೈನ್ ಡೆಸ್ಕ್ಗೆ ಸಲ್ಮಾನ್ ಅವರಿಂದ ₹5 ಕೋಟಿ ಕೊಡಿಸುವಂತೆ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬAಧ ಪೊಲೀಸರು ಜಮ್ಶೇಡ್ಪುರ ಮೂಲದ ವ್ಯಕ್ತಿಯನ್ನು ಬಂಧಿಸಿದ್ದರು. ಇದೀಗ ಮತ್ತೆ ಅವರಿಗೆ ಜೀವ ಬೆದರಿಕೆ ನೀಡಲಾಗಿದೆ.
ಮುಂಬೈ ಟ್ರಾಫಿಕ್ ಪೊಲೀಸರಿಗೆ ಅ.29ರಂದು ₹2 ಕೋಟಿ ಹಣ ನೀಡದಿದ್ದರೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಅನಾಮಧೇಯ ವ್ಯಕ್ತಿಯಿಂದ ಸಂದೇಶ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬAಧ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.