ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಜಾಮೀನಿಗಾಗಿ ಸತತ ಪ್ರಯತ್ನ ಮಾಡಿ ಪ್ರತೀ ಬಾರಿ ನಿರಾಸೆಗೆ ಒಳಗಾಗಿದ್ರು. ಆದರೆ ಇಂದು ಅವರ ಆರೋಗ್ಯ ವಿಚಾರಕ್ಕೆ ಸಂಬAಧಿಸಿ ಆರು ವಾರಗಳ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.
ಜಾಮೀನು ಮಂಜೂರಾದ ಕೂಡಲೇ ವಿಷಯವನ್ನು ಜೈಲು ಸಿಬ್ಬಂದಿ ದರ್ಶನ್‌ಗೆ ತಿಳಿಸಿದರು ಆದರೆ, ಆರಂಭದಲ್ಲಿ ವಿಷಯವನ್ನು ದರ್ಶನ್ ನಂಬಲಿಲ್ಲ ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ತಿಳಿಸಿದ ಬಳಿಕ ಸಂತೋಷಗೊAಡರು ಎಂದು ಕೆಲ ಸಿಬ್ಬಂದಿ ಮಾಹಿತಿ ನೀಡಿದರು.
ಸದ್ಯ ಕೋರ್ಟ್ ಜಾಮೀನು ಮಂಜೂರು ಮಾಡಿದೆ ನಿಜ. ಆದರೆ ಆದೇಶ ಪ್ರತಿ ಇನ್ನೂ ಜೈಲು ತಲುಪಿಲ್ಲ. ಹೀಗಾಗಿ ದರ್ಶನ್ ಇಂದು ಜೈಲಿನಿಂದ ಹೊರಬರುತ್ತಾರ ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ದೀಪಾವಳಿ ಹಿನ್ನಲೆ ಸರಕಾರಿ ರಜೆ ಇರೋದರಿಂದ 3ರಿಂದ 4 ದಿನ ತಡವಾಗಿ ದರ್ಶನ್ ಸೆರೆವಾಸದಿಂದ ಹೊರಬರುತ್ತಾರಾ? ಸರಕಾರಿ ರಜೆ ದರ್ಶನ್ ಬಿಡುಗಡೆಗೆ ತೊಂದರೆಯಾಗುತ್ತಾ ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ. ಈ ಬಗ್ಗೆ ಬಳ್ಳಾರಿ ಜೈಲು ಅಧೀಕ್ಷಕಿ ಲತಾ ಅವರು ಸ್ಪಷ್ಟನೆ ನೀಡಿದ್ದಾರೆ.
‘ಸಂಜೆ 6.30ಕ್ಕೆ ಜೈಲನ್ನು ಲಾಕಪ್ ಮಾಡುತ್ತೇವೆ. ಅಷ್ಟರ ಒಳಗಾಗಿ ನಮಗೆ ಜಾಮೀನು ಪ್ರತಿ ತಲುಪಬೇಕು. ಒಂದು ವೇಳೆ ಸಂಜೆ 6.30ರ ನಂತರ ಸಿಕ್ಕರೆ ನಾಳೆಗೆ ಬಿಡುಗಡೆ ಮಾಡಲಾಗುವುದು. ಒಂದೋ, ನ್ಯಾಯಾಲಯದ ಅಧಿಕೃತ ಇ–ಮೇಲ್ ಐಡಿಯಿಂದ ನಮಗೆ ಜಾಮೀನು ಪ್ರತಿ ಸಿಗಬೇಕು. ಇಲ್ಲವೇ ಕುಟುಂಬಸ್ಥರಾದರೂ ಖುದ್ದಾಗಿ ತಂದು ಹಾಜರುಪಡಿಸಬೇಕು. ಜಾಮೀನು ಪ್ರತಿ ಸಿಕ್ಕ ಕೂಡಲೇ ಅವರನ್ನು ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
‘ವಿಚಾರಣಾಧೀನ ಕೈದಿಗಳನ್ನು ಕೋರ್ಟ್ ಹೇಳಿದ ಕೂಡಲೇ ಬಿಡುಗಡೆ ಮಾಡಬೇಕಾಗುತ್ತದೆ. ಸರ್ಕಾರಿ ರಜೆಗಳು ಇವರಿಗೆ ಅನ್ವಯವಾಗುವುದಿಲ್ಲ’ ಎಂದೂ ಅವರೂ ಸ್ಪಷ್ಪಪಡಿಸಿದರು.
ದರ್ಶನ್‌ಗೆ ಜಾಮೀನು ಮಂಜೂರಾಗುತ್ತಲೇ ಇತ್ತ ಬಳ್ಳಾರಿ ಜೈಲು ಬಳಿ ಅಭಿಮಾನಿಗಳು ಒಬ್ಬೊಬ್ಬರಾಗಿಯೇ ಬರಲಾರಂಭಿಸಿದ್ದಾರೆ. ಈ ಹಿನ್ನಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.