ಸಾಂದರ್ಭಿಕ ಚಿತ್ರ
ಪಾಟ್ನಾ: ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ನರ್ಸ್ ವೈದ್ಯನ ಗುಪ್ತಾಂಗ ಕತ್ತರಿಸಿ ಎಸ್ಕೇಪ್ ಆದ ಘಟನೆ ಸಮಷ್ಟಿಪುರ ಜಿಲ್ಲೆಯ ಗಂಗಾಪುರ ಎಂಬಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಒಬ್ಬರು ಇನ್ನೇನು ಕೆಲಸ ಮುಗಿಸಬೇಕು ಎಂಬ ಹಂತದಲ್ಲಿದ್ದಾಗ, ಆಡಳಿತಾಧಿಕಾರಿ ಡಾ.ಸಂಜಯ್ ಕುಮಾರ್ ಮತ್ತು ಆತನ ಇಬ್ಬರು ಸಹಚರರು ಮದ್ಯಪಾನ ಮಾಡಿ ಬಂದು ನರ್ಸ್ ಮೇಲೆ ಅತ್ಯಾಚಾರ ಎಸಗುವ ಪ್ರಯತ್ನ ಮಾಡಿದರು. ಅದಕ್ಕೂ ಮೊದಲು ಈ ಕಾಮುಕರು ಆಸ್ಪತ್ರೆಗೆ ಒಳಗಿನಿಂದ ಬೀಗ ಜಡಿದು, ಸಿಸಿಟಿವಿಗಳ ಸ್ವಿಚ್ ಆಫ್ ಮಾಡಿದ್ದರು. ನರ್ಸ್ ಮೇಲೆ ಅತ್ಯಾಚಾರದ ಪ್ರಯತ್ನ ನಡೆದಾಗ ನರ್ಸ್ ಬ್ಲೇಡ್ ನಿಂದ ವೈದ್ಯನ ಗುಪ್ತಾಂಗವನ್ನು ಕತ್ತರಿಸಿ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರ ತಂಡ ನರ್ಸ್ ಸುರಕ್ಷೆಯನ್ನು ಖಾತರಿಪಡಿಸಿ, ಆಸ್ಪತ್ರೆಯ ಹೊರಗಿನ ಹೊಲದಲ್ಲಿ ಅಡಗಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನರ್ಸ್ ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಡಿವೈಎಸ್ಪಿ ಸಂಜಯ್ ಕುಮಾರ್ ಪಾಂಡೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.