ಬೆಳ್ತಂಗಡಿ: ಬಳೆಂಜ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಶಾಸಕರಾದ ಹರೀಶ್ ಪೂಂಜರವರು ಮನವಿ ಸಲ್ಲಿಸಿದರು.
ಮನವಿಯಲ್ಲಿ, “ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ, ಬಳೆಂಜ ಈ ಶಾಲೆಯು ಪ್ರಾರಂಭವಾಗಿ 75 ವರ್ಷಗಳನ್ನು ಪೂರೈಸುತ್ತಿದ್ದು, ಬಳೆಂಜ, ನಾಲ್ಕೂರು, ತೆಂಕಕಾರಂದೂರು ಹಾಗೂ ಸುತ್ತಮುತ್ತಅನ ಪ್ರದೇಶದ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, 75 ವರ್ಷ ಪೂರೈಸುತ್ತಿರುವ ಈ ಪರ್ವಕಾಲದಲ್ಲಿ ಈ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಕೊಠಡಿಗಳ ನಿರ್ಮಾಣ ಅವಶ್ಯವಾಗಿರುತ್ತದೆ. ಶಾಲೆಯ ಹಿತೈಷಿಗಳು, ಹಳೆ ವಿಧ್ಯಾರ್ಥಿಗಳು ಸೇರಿಕೊಂಡು ಶಾಲೆಯ ಅಮೃತ ಮಹೋತ್ಸವವನ್ನು ಪ್ರೇರಣಾದಾಯಕವಾಗಿ ನೆರವೇರಿಸಲು ಬಳೆಂಜ ಶಿಕ್ಷಣ ಟ್ರಸ್ಟ್ ರಚಿಸಿ ದಾನಿಗಳ ಸಹಕಾರವನ್ನು ಬಳಸಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಶಿಕ್ಷಣ ಇಲಾಖೆಯ ಮೂಲಕ ತಾವುಗಳು ಶಾಲೆ ಅಭಿವೃದ್ಧಿ ಪಡಿಸಲು ರೂ. 2,00 ಕೋಟಿಗಳ ವಿಶೇಷ ಅನುದಾನ ಮಂಜೂರು ಮಾಡುವಂತೆ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ” ಎಂದಿದ್ದಾರೆ.